ಬೆಂಗಳೂರು ಒಂದೇ ಮಳೆಗೆ ತೊಯ್ದು ಹೋಗಿದೆ. ಎಲ್ಲಿ ನೋಡಿದರೂ ಕೆರೆ, ನದಿಗಳು ಉದ್ಭವವಾಗಿವೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರು ಸುಸ್ತಾಗಿ ಹೋಗಿದೆ. ಎರಡೇ ದಿನಕ್ಕೆ ಗ್ರೇಟರ್ ಬೆಂಗಳೂರಿನ ನಿಜ ಬಣ್ಣ ಬಯಲಿಗೆ ಬಂದಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ನದಿಯಂತಾಗಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದು ನೀರು ನಿಂತಿವೆ. ವಾಹನ ಸವಾರರು ನಿಂತು ನಿಂತು ಸಾಗುತ್ತಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಪರಿಹಾರ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇಂದು ಕೂಡ ಮಳೆ ಮುಂದುವೆರಿದಿದ್ದು, ಜನ ಹೈರಾಣಾಗಿದ್ದಾರೆ.



















