ಬೆಂಗಳೂರಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಹಿತೈಷಿಗಳಿಂದ ಜು. 17ರಂದು ಮಧ್ಯಾಹ್ನ 2 ರಿಂದ ಮಧ್ಯರಾತ್ರಿ 12ರ ವರೆಗೆ ಬೈಂದೂರು ಕ್ಷೇತ್ರದವರೆಲ್ಲ ಒಂದುಗೂಡುವ ‘ಸಂಕಲ್ಪ’ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ವಿಜಯನಗರದಲ್ಲಿನ ಬಂಟರ ಸಂಘದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಪರ್ಕದ ಸಂವಾದಕ್ಕೆ ಸಮೃದ್ಧಿಯ ಗುರಿ ಎಂಬ ಘೋಷವಾಕ್ಯದಡಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಕರಾವಳಿ ಭಾಗದಲ್ಲಿನ ಪ್ರಸಿದ್ಧ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಊರಿನ ಸುಪ್ರಸಿದ್ಧ ಭಜನಾ ತಂಡಗಳು ಆಗಮಿಸುತ್ತಿವೆ. ಆನಂತರ ಅಮ್ಮ, ಭಗವತಿ, ಮೂಕಾಂಬಿಕೆಯ ಶಕ್ತಿ ಮತ್ತು ಭಕ್ತಿ ಪಾರಮ್ಯ ಮೆರೆಯುವ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ಬಡಗುತ್ತಿನ ಸಾಂಪ್ರದಾಯಿಕ ಶ್ರೀರಾಮ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಪ್ರದರ್ಶನವು ಎಲ್ಲ ವೇಷಗಳು, ಪದ್ಯಗಳು, ಶುದ್ಧ ಬಡಗುತಿಟ್ಟಿನ ಸಂಪ್ರದಾಯದಂತೆ ಪ್ರದರ್ಶನಗೊಳ್ಳಲಿವೆ. ಈ ಕಾರ್ಯಕ್ರಮಕ್ಕೆ ಬೈಂದೂರು ಕ್ಷೇತ್ರದವರು ಆಗಮಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.



















