ಈ ಬಾರಿ ಐಪಿಎಲ್ ನಲ್ಲಿ ದಾಖಲೆ ಮೊತ್ತಕ್ಕೆ ಬಿಕರಿಯಾಗಿದ್ದ ಆಟಗಾರ ಇದೀಗ ಅತಿಯಾದ ಟ್ರೋಲ್ ಗೆ ಒಳಗಾಗಿದ್ದಾರೆ.
ಹೌದು! ಬರೋಬ್ಬರಿ 27 ಕೋಟಿ ರೂ. ಮೌಲ್ಯಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇಲ್ ಆಗಿದ್ದ ರಿಷಭ್ ಪಂತ್ ಈಗ ಇನ್ನಿಲ್ಲದ ಟೀಕೆಗೆ ಗುರಿಯಾಗುತ್ತಿದ್ದಾರೆ. ಭಾನುವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಕಲೆಹಾಕಿದ ರಿಷಬ್ ಹಿಂದೆ ಕ್ರಿಕೆಟ್ ಪ್ರಿಯರು ಕೈ ತೊಳೆದುಕೊಂಡು ಬೆನ್ನು ಹತ್ತಿದ್ದಾರೆ. 27 ಕೋಟಿ ರೂ. ಬಾಚಿದ ಆಟಗಾರ ಕನಿಷ್ಠ 27 ರನ್ ಆದರೂ ಸಿಡಿಸಲಿ ಅಂತಾ ನೆಟ್ಟಿಗರು ಬೆಂಡೆತ್ತಿದ್ದಾರೆ.
ಅಷ್ಟೇ ಅಲ್ಲಾ ರಿಷಬ್ ಗೆ ಆತ್ಮಸಾಕ್ಷಿ ಇದ್ದರೆ 27 ಕೋಟಿ ರೂ. ಹಣವನ್ನು ಮರಳಿ ತಂಡದ ಮಾಲೀಕರಿಗೆ ವಾಪಸ್ ಮಾಡಲಿ ಅಂತ ಕಾಲೆಳೆಯುತ್ತಿದ್ದಾರೆ. ಈಗಾಗಲೇ ಲಖನೌ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಖುದ್ದು ನಾಯಕ ರಿಷಭ್ ಇದೇ ಪ್ರದರ್ಶನ ಮುಂದುವರಿಸಿದರೆ, ತಂಡದ ಗತಿ ಅಧೋಗತಿ ಅಂತಲೂ ಕ್ರಿಕೆಟ್ ಪ್ರಿಯರು ಟೀಕಿಸುತ್ತಿದ್ದಾರೆ.