ಚೆನ್ನೈ: ಪ್ರೀಮಿಯರ್ ಲೀಗ್ ಗೆ ಆಯ್ಕೆಯಾಗದಿದ್ದಕ್ಕೆ ಮನನೊಂದು ಕ್ರಿಕೆಟಿಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಯುವ ಕ್ರಿಕೆಟಿಗ (Tamil nadu Young Cricketer) ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 20 ಅಡಿ ಎತ್ತರದಿಂದ (20 Feet Flyover) ಜಿಗಿದಿದ್ದಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್-2024ಕ್ಕೆ (Tamil Nadu Premier League 2024) ಆಯ್ಕೆಯಾಗದ ಹಿನ್ನೆಲೆಯಲ್ಲಿ ಯುವ ಆಟಗಾರ ವಿರುಗಕ್ಕಂಬಾಕ್ಕಂ ನಿವಾಸಿ 26 ವರ್ಷದ ಎಸ್.ಸ್ಯಾಮೂಯಲ್ ರಾಜಾ (S Samuel Raj suicide) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್.ಸ್ಯಾಮೂಯಲ್ ರಾಜಾ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕೆಂದು ಸತತವಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದ. ಆದರೆ ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗಿರಲಿಲ್ಲ. ಹೀಗಾಗಿ ಮನನೊಂದು ಬಿದ್ದಿದ್ದಾನೆ ಎನ್ನಲಾಗಿದೆ. ಆತ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎನ್ನಲಾಗಿದೆ.
ಎಸ್.ಸ್ಯಾಮೂಯಲ್ ರಾಜಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.