ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ದಿನದಿನಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತೀವ್ರ ತನಿಖೆ ಮುಂದುವರಿಸಿದೆ. ಈ ನಡುವೆ ಸಾಕ್ಷಿ ನಾಶ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯೊಂದು ಈಗ ಮೇಲೆದ್ದಿದೆ.
ಧರ್ಮಸ್ಥಳ ಹಾಗೂ ಅಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿ ಅಸಹಜ ಸಾವಿಗೀಡಾಗಿರುವ ಶವಗಳನ್ನು ಅಕ್ರಮವಾಗಿ ʼಪ್ರಭಾವಿʼ ವ್ಯಕ್ತಿಯೋರ್ವರ ಸೂಚನೆಯಂತೆ ಹೂತಿಟ್ಟಿದ್ದೇನೆ ಎಂಬ ಆರೋಪದಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ರಾತ್ರೋರಾತ್ರಿ ಸಾಕ್ಷಿ ನಾಶಕ್ಕೆ ಮುಂದಾದಂತೆ ಬೆಳವಣಿಗೆಯೊಂದು ನಡೆದಿರುವ ದೃಶ್ಯ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಗತ್ತಲಲ್ಲಿ ಸತ್ಯ ಮರೆಮಾಚಲು ನಿಗೂಢ ಯತ್ನ ನಡೆದಿದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದ್ದು, ಸೌಜನ್ಯ ಮೃತದೇಹ ಪತ್ತೆಯಾದ ಜಾಗದಲ್ಲಿ ಹೊಸ ಮಣ್ಣು ಪತ್ತೆಯಾಗಿದೆ. ರಾತ್ರೋರಾತ್ರಿ ಇಲ್ಲಿ ಮಣ್ಣು ಗುಡ್ಡೆಯನ್ನು ತಂದು ಹಾಕಿದವರು ಯಾರು ಎನ್ನುವ ಪ್ರಶ್ನೆ ಈಗ ಕುತೂಹಲ ಕೆರಳಿಸಿದೆ.
ಈ ಮಣ್ಣುಗುಡ್ಡೆ ತಂದು ಹಾಕಿದವರ ಹಿಂದೆ ಯಾರ ಕೈವಾಡವಿದೆ? ರಾತ್ರೋರಾತ್ರಿ ಲೋಡುಗಟ್ಟಲೇ ಹೊಸ ಮಣ್ಣನ್ನು ಸೌಜನ್ಯ ಮೃತದೇಹ ಪತ್ತೆಯಾದ ಜಾಗದಲ್ಲಿ ಸುರಿದವರು ಯಾರು ? ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹದ್ದೊಂದು ಬೆಳವಣಿಗೆ ನಡೆದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.



















