ರಿಯಲ್ಮಿ ಇಂಡಿಯಾ ಭಾರತದ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹಲವಾರು ಹೊಸತನಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಛಾಪು ಮೂಡಿಸಲು ಮುಂದಾಗಿದೆ. ಈ ಬಾರಿ ಬಣ್ಣಬದಲಾಯಿಸುವ ಫೋನ್ ಮೂಲಕ ಗ್ರಾಹಕರ ಮನ ಸೆಳೆಯಲು ಮುಂದಾಗಿದೆ ಜನವರಿ 16, 2025 ರಂದು ರಿಯಲ್‌ಮಿ ತನ್ನ 14 ಪ್ರೊ ಸೀರಿಸ್ ಬಿಡುಗಡೆ ಮಾಡಿದೆ (Realme 14 Pro 5G). ಇದು ನಾರ್ಡಿಕ್ ಸ್ಟುಡಿಯೊ ವ್ಯಾಲೆರ್ ಡಿಸೈನರ್ಸ್ ಸಹಯೋಗದೊಂದಿಗೆ ನಿರ್ಮಿಸಿದೆ. ಇದು ವಿಶ್ವದ ಮೊಟ್ಟ ಮೊದಲ ಕೋಲ್ಡ್ ಸೆನ್ಸಿಟಿವ್ ಬಣ್ಣ ಬದಲಾಯಿಸುವ ಫೋನ್ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ರಿಯಲ್ ಮಿ 14 ಪ್ರೊ 5 ಜಿ ಮತ್ತು ರಿಯಲ್ ಮಿ 14 ಪ್ರೊ + 5 ಜಿ ಎಂಬ ಎರಡು ಸೀರಿಸ್‌ನಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಪರ್ಲ್ ವೈಟ್ ಬಣ್ಣದ ಫೋನ್ ಬಣ್ಣ ಬದಲಾಯಿಸಿಕೊಳ್ಳುವ ಗುಣ ಹೊಂದಿದೆ. ಅಂದರೆ, ಹೊರಗಿನ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾದಾಗ, ಹಿಂಭಾಗದ ಕವರ್ ಬಣ್ಣ ಪರ್ಲ್ ವೈಟ್‌ನಿಂದ ವೈಬ್ರೆಂಟ್ ಬ್ಲೂಗೆ ಪರಿವರ್ತನೆಗೊಳ್ಳುತ್ತದೆ. ತಾಪಮಾನ ಹೆಚ್ಚಾದಾಗ ಇದು ಮತ್ತೆ ಪರ್ಲ್‌ವೈಟ್‌ಗೆ ಮರಳುತ್ತದೆ.

ಫೋನ್ ಪರ್ಲ್ ವೈಟ್ ಮತ್ತು ಸ್ಯೂಡ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ ಬಿಕಾನೇರ್ ಪರ್ಪಲ್(Bikaner Purple) ಮತ್ತು ಜೈಪುರ್ ಪಿಂಕ್(Jaipur Pink) ಎಂಬ ಎರಡು ಬಣ್ಣಗಳನ್ನು ಭಾರತೀಯ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.
ರಿಯಲ್ ಮಿ 14 ಪ್ರೊ+ 5ಜಿ ಲಕ್ಷಣಗಳು
ರಿಯಲ್‌ಮಿ 14 ಪ್ರೊ + 5 ಜಿ 6.83 ಇಂಚಿನ ಅಮೋಲೆಡ್ ಕ್ವಾಡ್-ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು 120 ಹರ್ಟ್ಜ್ ರಿಫ್ರೆಶ್ ರೇಟ್ ಮತ್ತು 1,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಪಡೆಯುತ್ತದೆ. ಇದರಲ್ಲಿ ಗೊರಿಲ್ಲಾ ಗ್ಲಾಸ್ 7 ಐ ನೀಡಲಾಗಿದ್ದು. . 6,000 ಎಂಎಎಚ್ ಬ್ಯಾಟರಿ ಮತ್ತು 80 ವ್ಯಾಟ್ ಫಾಸ್ಟ್ ಚಾರ್ಜರ್ ಕೂಡ ನೀಡಲಾಗಿದೆ.
ಪ್ರೊ ಮತ್ತು ಪ್ರೊ + ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಪ್ಲಸ್ ಸ್ನ್ಯಾಪ್‌ಡ್ರಾಗನ್ 7 ಎಸ್ ಜೆನ್ 3 ಪ್ರೊಸೆಸರ್ . ಸ್ಟ್ಯಾಂಡರ್ಡ್ ವೇರಿಯೆಂಟ್ ಸ್ವಲ್ಪ ಹಳೆಯ ಸಿಪಿಯು ಕೋರ್‌ಗಳೊಂದಿಗೆ ಡೈಮೆನ್ಸಿಟಿ 7300ನಿಂದ ನಿಯಂತ್ರಿಗೊಂಡಿದೆ. ಫೋನ್ ಗಳು 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಜತೆಗೆ ಬರುತ್ತದೆ.
ಆಂಡ್ರಾಯ್ಡ್ 15 ಆಧಾರಿತ ರಿಯಲ್ ಮಿ ಯೂಸರ್ ಇಂಟರ್‌ಫೇಸ್ 6.0 ಹೊಂದಿದೆ. ಇದು 50 ಎಂಪಿ ಮೇನ್ ಸೋನಿ ಐಎಂಎಕ್ಸ್ 896 ಸೆನ್ಸಾರ್, 50 ಎಂಪಿ ಸೋನಿ ಐಎಂಎಕ್ಸ್ 882 ಟೆಲಿಫೋಟೋ ಲೆನ್ಸ್ ಮತ್ತು 8 ಎಂಪಿ ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಆಗಿದ್ದು, ಟ್ರಿಪಲ್ ಫ್ಲ್ಯಾಶ್ ಹೊಂದಿದೆ.
ರಿಯಲ್ ಮಿ 14 ಪ್ರೊ 5ಜಿ ಲಕ್ಷಣಗಳು
ರಿಯಲ್‌ಮಿ 14 ಪ್ರೊ 5ಜಿ 6.77 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 ಹರ್ಟ್ಜ್ ರಿಫ್ರೆಶ್ ರೇಟ್ ಮತ್ತು 4,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಇದರ ಬ್ಯಾಟರಿ ಕೂಡ 6,000 ಎಂಎಎಚ್ ಸಾಮರ್ಥ್ಯದ್ದು. ಆದರೆ ಚಾರ್ಜರ್ 45 ವ್ಯಾಟ್ ಫಾಸ್ಟ್ ಜಾರ್ಜಿಂಗ್ ನೀಡಲಾಗಿದೆ. ಇದು 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಯೂಸರ್ ಇಂಟರ್‌ಫೇಶ್ ಪ್ಲಸ್ ವೇರಿಎಂಟ್ ರೀತಿಯೇ ಇರುತ್ತದೆ.
14 ಪ್ರೊ 50 ಎಂಪಿ ಮುಖ್ಯ ಕ್ಯಾಮೆರಾ, 13 ಎಂಪಿ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಎಂಪಿ ಮ್ಯಾಕ್ರೋ ಸೆನ್ಸಾರ್ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬೆಲೆ ಎಷ್ಟಿದೆ?
ರಿಯಲ್‌ಮಿ 14 ಪ್ರೊ + 5 ಜಿ 8 ಜಿಬಿ / 128 ಜಿಬಿ ವೇರಿಯೆಂಟ್‌ಗೆ 29,999 ರೂ., 8 ಜಿಬಿ / 256 ಜಿಬಿ ವೇರಿಯೆಂಟ್‌ಗೆ 31,999 ರೂ., 12 ಜಿಬಿ / 256 ಜಿಬಿ ವೇರಿಯೆಂಟ್‌ಗೆ 34,999 ರೂಪಾಯಿ ನಿಗದಿ ಮಾಡಲಾಗಿದೆ. ರಿಯಲ್ಮಿ 14 ಪ್ರೊ 5 ಜಿ 8 ಜಿಬಿ / 128 ಜಿಬಿ ರೂಪಾಂತರಕ್ಕೆ 24,999 ರೂ ಮತ್ತು 8 ಜಿಬಿ / 256 ಜಿಬಿ ಮಾದರಿಗೆ 26,999 ರೂಪಾಯಿ ಇದೆ.
ರಿಯಲ್ ಮಿ ಬಡ್ಸ್ ವೈರ್ ಲೆಸ್ 5 ಎಎನ್‌ಸಿಯನ್ನು ಸಹ ಬಿಡುಗಡೆ ಮಾಡಿದೆ, ಇದು 50 ಡಿಬಿ ಹೈಬ್ರಿಡ್ ಆಕ್ಷಿವ್ ನಾಯ್ಸ್ ಕ್ಯಾನ್ಸಲೇಷನ್ ಹೊಂದಿದೆ. 38 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇಯರ್ ಬಡ್ ಧೂಳು ಮತ್ತು ನೀರಿಗೆ ಐಪಿ 55 ರೇಟಿಂಗ್ ಹೊಂದಿವೆ. ಬೆಲೆ ₹ 1,799 ನಿಗದಿ ಮಾಡಿದ್ದಾರೆ.