ಅಮೆರಿಕ: ಜಗತ್ತಿನಲ್ಲಿ ಆಗಾಗ ಪವಾಡಗಳು ನಡೆಯುತ್ತಿರುತ್ತವೆ. ಹಲವಾರು ಆಶ್ಚರ್ಯಕರ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಲೇ ಇರುತ್ತವೆ. ಈಗ ಅಮೆರಿಕದಲ್ಲಿ ಕೂಡ ಇಂತಹ ಘಟನೆಯೊಂದು ನಡೆದಿದೆ.
ಬ್ರೈನ್ ಡೆಡ್ ಎಂದು ಘೋಷಿಸಲಾದ ವ್ಯಕ್ತಿಯ ಅಂಗಾಂಗ ದಾನಕ್ಕಾಗಿ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ವೈದ್ಯರು ಆ ವ್ಯಕ್ತಿಯ ಅಂಗಾಂಗ ತೆಗೆದು ದಾನಕ್ಕಾಗಿ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಹೃದಯ ತೆಗೆಯಬೇಕು ಅನುವಷ್ಟರಲ್ಲಿ ಬ್ರೈನ್‌ಡೆಡ್ ಆಗಿರುವ ವ್ಯಕ್ತಿ ಎದ್ದು ಕುಳಿತಿದ್ದಾರೆ. ಇದನ್ನು ಕಂಡು ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಮೇರಿಕಾದ ಕೆಂಟುಕಿಯ ಥಾಮಸ್ ಎಂಬ 36 ವರ್ಷದ ವ್ಯಕ್ತಿ, ಮಾದಕ ವಸ್ತುವಿನ ಮಿತಿ ಮೀರಿದ ಸೇವನೆಯಿಂದಾಗಿ ಆತನ ಬ್ರೈನ್‌ಡೆಡ್ ಆಗಿದೆ ಎಂದು ವೈದ್ಯರು ಹೇಳಿದ್ದರು. 36 ವರ್ಷ ಆಗಿದ್ದರಿಂದ ಆತನ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಹೀಗಾಗಿ ಆ ಕಾರ್ಯವನ್ನು ವೈದ್ಯರು ಮಾಡುತ್ತಿದ್ದರು.
ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಆತ ದ್ದು ಕುಳಿತಿದ್ದಾನೆ. ಸದ್ಯ ಈ ಸುದ್ದಿ ಕೇಳಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.