ವಿಜಯಪುರ: ವ್ಯಕ್ತಿಯೊಬ್ಬರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು 14 ಲಕ್ಷರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ನಿವೃತ್ತ ನೌಕರ ಬಸವರಾಜ್ ಹವಾಲ್ದಾರ್ ಎಂಬುವವರೇ ಹಣ ಕಳೆದುಕೊಂಡ ವ್ಯಕ್ತಿ. ಅವರ ಖಾತೆಯಿಂದ ಸೈಬರ್ ಖದೀಮರು (Cyber Crime) 14 ಲಕ್ಷ ರೂ. ಯಾಮಾರಿಸಿದ್ದಾರೆ ಎನ್ನಲಾಗಿದೆ.
ಬಸವರಾಜ ಹವಾಲ್ದಾರ್ ಅವರ ಮೊಬೈಲ್ ನಲ್ಲಿದ್ದ ಆನ್ ಲೈನ್ ಬ್ಯಾಂಕಿಗ್ ಗೆ ಬೆನಿಫೀಷರ್ ಆ್ಯಡ್ ಮಾಡಿ ಅದರ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೋಸ ಹೋದ ವ್ಯಕ್ತಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನಂತರ ಬ್ಯಾಂಕ್ ಖಾತೆ ಲಾಕ್ ಮಾಡಿಸಿದ್ದಾರೆ.
ಮೊಬೈಲ್ ನಲ್ಲಿ ಎಪಿಕೆಯಿಂದ ಡೌನ್ಲೋಡ್ ಮಾಡಿಕೊಂಡ ಆ್ಯಪ್ ನಿಂದಲೇ ಹಣ ದೋಚಲಾಗಿದೆ ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಪಿಕೆ ಫೈಲ್ ಮೂಲಕ ಹ್ಯಾಕರಗಳು ಆ್ಯಪ್ ಗಳನ್ನು ಕಳುಹಿಸುತ್ತಾರೆ. ಎಪಿಕೆ ಪೈಲ್ ಓಪನ್ ಮಾಡಿ ಅದರಲ್ಲಿರುವ ಆ್ಯಪ್ ಡೌನ್ ಲೋಡ್ ಮಾಡಿದರೆ ನಮ್ಮ ಖಾತೆಯನ್ನೇ ಮುಗಿಸುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.