ಕೊಪ್ಪಳ: ಕೊಪ್ಪಳ ತಾಲೂಕಿನ ಅಬ್ಬಿಗೇರಿಯಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆ, ಬಿರುಗಾಳಿಗೆ ಪಪ್ಪಾಯಿ ಮರಗಳು ನೆಲಕ್ಕುರುಳಿವೆ.

ಅಬ್ಬಿಗೇರಿಯ ಮಾರ್ಕಂಡಯ್ಯ ಹಿರೇಮಠ ಎಂಬುವವರು ಸುಮಾರು ಮೂರು ಎಕರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪಪ್ಪಾಯ ಬೆಳೆದಿದ್ದರು. ಉತ್ತಮ ಇಳುವರಿಯಿಂದ ಅದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಇದೀಗ ಆತಂಕ ಸೃಷ್ಟಿಯಾಗಿದೆ. ಆದಷ್ಟು ಬೇಗ ಜಿಲ್ಲಾಡಳಿತ ಸಮಿಕ್ಷೆ ಮಾಡಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.



















