ಬೆಳಗಾವಿ: ತಾಯಿಯೊಬ್ಬಳು ಎರಡು ತಿಂಗಳ ಮಗುವನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆರೆಗೆ ಮಗು ಎಸೆಯುವುದನ್ನು ಅಲ್ಲಿದ್ದ ಸ್ಥಳೀಯರು ನೋಡಿದ್ದಾರೆ. ಕೂಡಲೇ ಕೆರೆಗೆ ಹಾಕಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ಪಿಡ್ಸ್ ಇದೆ ಎಂಬ ಕಾರಣಕ್ಕೆ ಕೆರೆಗೆ ಎಸೆದಿದ್ದಾಳೆ ಎಂದು ತಿಳಿದು ಬಂದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಎಂಬುವವರು ಈ ಕೃತ್ಯ ಎಸಗಿದ್ದಾರೆ. ಕೆಲವು ಸ್ಥಳೀಯರು ಮಗು ಎಸೆದು ಹೋಗುತ್ತಿದ್ದ ತಾಯಿಯನ್ನು ಹಿಡಿದು ಪೊಲೀರಿಗೆ ಒಪ್ಪಿಸಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಗೆ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಪತಿ ಹಿಂಡಾಲ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಇದನ್ನ ಗಮನಿಸಿದ ಸವಾರ ಕನ್ನಯ್ಯಾ ಜಂಬಾಳೆ ಎಂಬಾತ ಓಡೋಡಿ ಹೋಗಿದ್ದಾರೆ. ಕಿರುಚಾಡಿ ಅಲ್ಲಿದ್ದ ಜನರನ್ನು ಸೇರಿಸಿದ್ದಾರೆ. ಜ್ಯೋತಿಬಾ ಎಂಬ ಯುವಕ ಕೂಡಲೇ ಕೆರೆಗೆ ಹಾರಿ ಮಗು ರಕ್ಷಿಸಿದ್ದಾರೆ.