‘ಪುಷ್ಪ 2’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗ ಈ ಚಿತ್ರದಿಂದಾಗಿ ಈಗ ಪೊಲೀಸರಿಗೂ ಸಹಾಯವಾಗಿದೆ.
ಮಹಾರಾಷ್ಟ್ರದ ನಾಗಪುರದಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಬಂದಿದ್ದ ಓರ್ವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ 10 ತಿಂಗಳಿನಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆತನನ್ನು ಚಿತ್ರಮಂದಿರದಲ್ಲೇ ಬಂಧಿಸಲಾಗಿದೆ.
ವಿಶಾಲ್ ಮೇಶರಾಮ್ ಬಂಧಿತ ಆರೋಪಿ. ಆತನ ವಿರುದ್ಧ ಬರೋಬ್ಬರಿ 27 ಕೇಸ್ ಗಳಿದ್ದವು. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆತ ಹಲವು ತಿಂಗಳುಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಆದರೆ, ‘ಪುಷ್ಪ 2’ ಸಿನಿಮಾ ನೋಡಲು ಬಂದಾಗ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆ, ಡ್ರಗ್ ಪೆಡ್ಲಿಂಗ್ ಸೇರಿದಂತೆ ಅನೇಕ ಆರೋಪಗಳು ಆತನ ಮೇಲಿವೆ. ಆತನನ್ನು ಹಿಡಿಯಲು ಪೊಲೀಸರು ಸಾಕಷ್ಟು ಪ್ರಯತ್ನಿಸಿ ಸುಸ್ತಾಗಿದ್ದರು. ‘ಪುಷ್ಪ 2’ ಸಿನಿಮಾ ನೋಡಲು ಆತ ಬಂದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದ್ದು, ಕೂಡಲೇ ಚಿತ್ರ ಮಂದಿರಕ್ಕೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಪುಷ್ಪ 2’ ಸಿನಿಮಾ ಜಗತ್ತಿನಾದ್ಯಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. 1500 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಅವರ ವೃತ್ತಿ ಜೀವನಕ್ಕೆ ಈ ಚಿತ್ರದಿಂದ ದೊಡ್ಡ ಮೈಲೇಜ್ ಸಿಕ್ಕಿದೆ.