ಭೋಪಾಲ್: ಚಲಿಸುತ್ತಿದ್ದ ಕಾರಿನಲ್ಲಿಯೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲೇ (Moving Car) 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
9ನೇ ತರಗತಿ ಓದುತ್ತಿದ್ದ ಬಾಲಕಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಜೂನ್ 1ರಂದು ಇಬ್ಬರು ವ್ಯಕ್ತಿಗಳೊಂದಿಗೆ ಭೇಟಿಯಾಗಿದ್ದ. ಆಗ ಬಾಲಕಿಗೆ ಲಾಂಗ್ ಡ್ರೈವ್ ಬರುವಂತೆ ಕೇಳಿದ್ದಾನೆ. ಬರಲ್ಲ ಎಂದು ಬಾಲಕಿ ಹೇಳಿದರೂ ಪೀಡಿಸಿದ್ದಾನೆ. ಹೀಗಾಗಿ ಬಾಲಕಿ ಹೋಗಿದ್ದಾಳೆ.
ಈ ವೇಳೆ ಕಾರಿನಲ್ಲಿ ಹೋಗುವಾಗ ಓರ್ವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮತ್ತೊಬ್ಬ ಕಾರು ಓಡಿಸುತ್ತಿದ್ದಾಗ, ಇನ್ನೊಬ್ಬ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಆನಂತರ ಅತ್ಯಾಚಾರ ಮಾಡಿದ ಆರೋಪಿ ಪದೇ ಪದೇ ಭೇಟಿಯಾಗಲು ಪೀಡಿಸಿದ್ದಾನೆ. ಇದವಾದರೆ, ಸಾಮಾಜಿಕ ಜಾಲತಾಮಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಆನಂತರ ಬಾಲಕಿ ಆತನ ಕೃತ್ಯ ವಿರೋಧಿಸಿದಾಗ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

















