ಬೆಂಗಳೂರು : ಹೆಚ್ಚಿನ ಪ್ರಮಾಣದ ಯುಪಿಐ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್‌ಗಳನ್ನು ನೀಡಲಾಗುತ್ತಿದೆ. ಯುಪಿಐ ಮೂಲಕ ಹೆಚ್ಚಿನ ವಹಿವಾಟು ನಡೆಸಿದ ಅಂಗಡಿ ಮಾಲೀಕರಿಗೆ ತೆರಿಗೆ ನೋಟಿಸ್‌ಗಳು ಬಂದ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ತೆರಿಗೆ ನೀತಿಯ ವಿರುದ್ಧ ಆಕ್ರೋಶ ಹೆಚ್ಚಿಸಿದೆ.
ಈಗ ಉಳ್ಳಾಲದ ಹಾಲೂ ವ್ಯಾಪಾರಿಗೂ ಜಿಎಸ್‌ಟಿ ತೆರಿಗೆ ನೋಟೀಸ್ ಬಂದಿದೆ. ಸಾವಿರ -ಲಕ್ಷ ಅಲ್ಲ, ಕೋಟಿ ಟರ್ನೋವರ್ ನೊಟೀಸ್ ಇದಾಗಿದ್ದು, ಒಂದು ಕೋಟಿ ಮೂರು ಲಕ್ಷದ ನೋಟೀಸ್ ನೀಡಿ ಕಾರಣ ಕೇಳಿದೆ.
ನೋಟೀಸ್ ಕಂಡು ಕಂಗಾಲಾ ಹಾಲ ವ್ಯಾಪಾರಿ ರವಿ, ಸರ್ಕಾರದ ಜಿ.ಎಸ್.ಟಿ ನೀತಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಹಾಲಲ್ಲಿ ಸಿಗುವುದು ಕೇವಲ ಒಂದೆರಡು ಪರ್ಸೆಂಟ್ ಲಾಭ ಅಷ್ಟೇ. ಅದರಲ್ಲಿ ನಾವು ಹೇಗೆ ಟ್ಯಾಕ್ಸ್ ಕಟ್ಟುವುದು ಎಂದು ಅವರು ಅವಲತ್ತುಕೊಂಡಿದ್ದಾರೆ.