ವಿಜಯ್ ರಾಘವೇಂದ್ರ ಬಾಲನಟನಾಗಿ ನಟಿಸಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಚಿನ್ನಾರಿ ಮುತ್ತ ಬಿಡುಗಡೆಯಾಗಿ ಇಂದಿಗೆ 31 ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಾಲನಟರಾಗಿದ್ದ ರಾಘವೇಂದ್ರ ರಾಜಕುಮಾರ್ ಚಿತ್ರವನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.
ಈ ಚಿತ್ರವನ್ನು ಟಿ.ಎಸ್. ನಾಗಾಭರಣ ನಿರ್ದೇಶನ ಮಾಡಿದ್ದರು. ‘ಚಿನ್ನಾರಿಮುತ್ತ’ ಸಿನಿಮಾ ಬಿಡುಗಡೆ ಆಗಿ 31 ವರ್ಷ ಕಳೆದಿವೆ. ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಅತ್ಯುತ್ತಮ ಪ್ರಶಸ್ತಿಗಳನ್ನು ಈ ಚಿತ್ರ ಗಳಿಸಿತ್ತು. ‘ಚಿನ್ನಾರಿಮುತ್ತ’ ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾದ ಚಿತ್ರೀಕರಣದ ಅನುಭವ, ಸಿನಿಮಾದಿಂದ ಧಕ್ಕಿದ ಜನಪ್ರಿಯತೆ, ಸಿನಿಮಾಕ್ಕೆ ಧಕ್ಕಿದ ಯಶಸ್ಸು ಇನ್ನಿತರೆ ವಿಷಯಗಳ ಬಗ್ಗೆ ನಟ ವಿಜಯ್ ರಾಘವೇಂದ್ರ ನೆನಪು ಮಾಡಿಕೊಂಡು ಸಂತಸ ಪಟ್ಟಿದ್ದಾರೆ.
ಈಗ ಟಿಎಸ್ ನಾಗಾಭರಣ ಪತ್ನಿ, ‘ಜೀನಿಯಸ್ ಮುತ್ತು’ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಮಕ್ಕಳ ಚಿತ್ರವಾಗಿದೆ. ಇದರ ಮಧ್ಯೆ ಚಿನ್ನಾರಿ ಮುತ್ತ 2 ಕೂಡ ಸಿದ್ಧವಾಗಲಿದೆ ಎನ್ನಲಾಗುತ್ತಿದೆ. ಅದು ಚಿನ್ನಾರಿ ಮುತ್ತ ಚಿತ್ರದ ಮುಂದುವರೆದ ಭಾಗವಾ? ಎಂಬುವುದನ್ನು ಕಾಯ್ದು ನೋಡಬೇಕಿದೆ.
