ಮಂಗಳೂರು: ವ್ಯಕ್ತಿಯೊಬ್ಬ ಹೆಬ್ಬಾವಿನ ಮರಿಯೆಂದು ಬಾವಿಸಿ ಕೊಳಕು ಮಂಡಲ (Kolaku Mandala) ಹಾವಿನ ಮರಿ ಹಿಡಿಯಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಂಟ್ವಾಳದ ರಾಮಚಂದ್ರ ಪೂಜಾರಿ ಈ ರೀತಿ ಕೊಳಕು ಮಂಡಲದಿಂದ ಕಚ್ಚಿಸಿಕೊಂಡು ಸಾವನ್ನಪ್ಪಿರುವ ವ್ಯಕ್ತಿ. ಮಂಗಳೂರು ಹೊರವಲಯದ ಬಜಪೆಯಲ್ಲಿ ಈ ಘಟನೆ ನಡೆದಿದೆ. ಬಂಟ್ವಾಳದ ರಾಮಚಂದ್ರ ಪೂಜಾರಿ (58) ಸಾವನ್ನಪ್ಪಿದ ದುರ್ದೈವಿ.
ಬಂಟ್ವಾಳದ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಅವರು ಸೆ. 4ರಂದು ಮಧ್ಯಾಹ್ನದ ವೇಳೆ ಮನೆಯ ಹತ್ತಿರ ಇರುವ ಹಾವಿನ ಮರಿ ನೋಡಿದ್ದಾರೆ. ಹೆಬ್ಬಾವಿನ ಮರಿ ಎಂದು ಭಾವಿಸಿ ಕೊಳಕು ಮಂಡಲ ಮರಿಯನ್ನು ರಾಮಚಂದ್ರ ಪೂಜಾರಿ ಬರಿಗೈಯಲ್ಲಿ ಹಿಡಿದಿದ್ದಾರೆ.
ಈ ವೇಳೆ ರಾಮಚಂದ್ರ ಅವರ ಕೈಗೆ ಕೊಳಕು ಮಂಡಲ ಕಚ್ಚಿದೆ. ಕಚ್ಚಿದ್ದು ಹೆಬ್ಬಾವಿನ ಮರಿ ಎಂದು ಭಾವಿಸಿ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ, ಸ್ವಲ್ಪ ಹೊತ್ತಿನ ನಂತರ ರಾಮಚಂದ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.