ಉತ್ತರ ಪ್ರದೇಶ: ತನ್ನ ಪ್ರೀತಿ ಸಾಬೀತು ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಂದಾದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯು ತನ್ನ ಹೆಂಡತಿಯ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದು ಅವರ ಕುಟುಂಬಸ್ಥರಿಗೂ ಗೊತ್ತಾಗಿದೆ. ವಿರೋಧದ ಮಧ್ಯೆಯೂ ಇಬ್ಬರೂ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಆದರೆ, ಕೆಲವು ದಿನಗಳಿಂದ ಆ ಮಹಿಳೆ ದೂರವಾಗಲು ಯತ್ನಿಸಿದ್ದಾರೆ.
ಇದರಿಂದ ಬೇಸರದಲ್ಲಿದ್ದ ಆ ವ್ಯಕ್ತಿ ಮಹಿಳೆಗೆ ಕರೆ ಮಾಡಿದ್ದಾನೆ. ಆ ವೇಳೆ ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನಿನ್ನ ಪ್ರಾಣವನ್ನೇ ತ್ಯಾಗ ಮಾಡಿ ತೋರಿಸು ಎಂದು ಆಕೆ ಹೇಳಿದ್ದಾಳೆ. ಮಹಿಳೆಯ ಮಾತಿನಂತೆ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.