ಮನುಷ್ಯನಿಗೆ ಸಾವು ಯಾವಾಗ ಬರುತ್ತದೆ ಎಂಬುವುದೇ ತಿಳಿಯುವುದಿಲ್ಲ. ಅದೆಲ್ಲ ದೇವರ ಇಚ್ಛೆ. ಇಲ್ಲೊಂದು ವಿಡಿಯೋ ಗಮನಿಸಿದರೆ, ಈ ಮಾತು ಸತ್ಯ ಎನಿಸುತ್ತದೆ.
ವ್ಯಕ್ತಿಯೊಬ್ಬರು ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೆಲ್ ಬಂದು ಮಾತನಾಡುತ್ತ ಕುಳಿತುಕೊಂಡಿದ್ದರು. ಊಟ ಕೂಡ ಟೇಬಲ್ ಮೇಲೆ ಒಂದೊಂದಾಗಿ ಬರುತ್ತಿದ್ದವು. ಇನ್ನೇನು ಊಟ ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯಾ ಸಿಂಗ್ (@priyarajputlive) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕುಟುಂಬ ಸಮೇತ ರೆಸ್ಟೋರೆಂಟ್ ಗೆ ಬಂದಾಗ ಈ ಘಟನೆ ನಡೆದಿದೆ. ಈ ವಿಡಿಯೋ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
