ಒಬ್ಬ ಮನುಷ್ಯ ಬದುಕಬೇಕು ಅಂದ್ರೆ ಗಾಳಿ ನೀರು ಎಷ್ಟು ಮುಖ್ಯವೋ ಊಟ ಅಥವಾ ಆಹಾರವು ಅಷ್ಟೇ ಮುಖ್ಯ. ಹಿಂದೆಲ್ಲಾ ಋಷಿಮುನಿಗಳು ತಪಸ್ಸು ಮಾಡಿ ನೂರಾರು ವರ್ಷಗಳು ಉಪವಾಸ ಇದ್ದರು ಎನ್ನುವುದನ್ನು ಕೇಳಿದ್ದೀವಿ. ಈಗಲೂ ಕೂಡ ಎಷ್ಟೋ ಬಾರಿ ಬರೀ ನೀರು ಕುಡಿದುಕೊಂಡೆ ಜೀವನ ಸಾಗಿಸಿರುವವರನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.
ಆದರೆ, ಇಲ್ಲೊಬ್ಬ ಕೇವಲ ಇಂಜೀನ್ ಆಯಿಲ್ ಕುಡಿದು ಬದುಕಿದ್ದಾನೆ ಅಂದರೆ ನೀವು ನಂಬುತ್ತೀರಾ..? ನಂಬಲು ಅಸಾಧ್ಯ ಅನಿಸಿದರೂ, ನಂಬಲೇಬೇಕು. ಕುಮಾರ್ ಎಂಬ ವ್ಯಕ್ತಿ ಕಳೆದ 29 ವರ್ಷಗಳಿಂದ ಇಂಜಿನ್ ಆಯಿಲ್ ಕುಡಿದು ಜೀವನ ಸಾಗಿಸುತ್ತಿದ್ದಾನೆ. ಈತ ಕೊಳ್ಳೇಗಾಲ ಮೂಲದವನಾಗಿದ್ದು, ಹಣವಿಲ್ಲದ ಕಾರಣ ಕೊಳ್ಳೇಗಾಲದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಸದ್ಯ ಈತ ಇಂಜಿನ್ ಕುಡಿಯುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗಿದ್ದು ನೆಟ್ಟಿಗರು ನಿಬ್ಬೆರಗಾಗಿದ್ದಾರೆ.