ಬೆಳಗಾವಿ: ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಮುಸ್ಲಿಂ ವಿವಾಹಿತ ಮಹಿಳೆಯೊಂದಿಗೆ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ನಡೆದಿತ್ತು. ಈಗ ಆತನ ಪತ್ನಿಯ ಕೈಗೆ ಮಹಿಳೆ ಸಿಕ್ಕಿದ್ದು, ಇಬ್ಬರು ನಡು ರಸ್ತೆಯಲ್ಲೇ ಜಡೆ ಹಿಡಿದು ಜಗಳ ಮಾಡಿದ್ದಾರೆ.
ಬೆಳಗಾವಿ (Belagavi) ನಗರದ ಕೊಲ್ಹಾಪುರ ಸರ್ಕಲ್ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಾರಿಹಾಳ ಗ್ರಾಂಪಂ ಸದಸ್ಯೆಯ ಪತಿ ಬಸವರಾಜ್ ಸೀತಿಮನಿ ಅದೇ ಗ್ರಾಮದ ಮಾಸಾಬಿ ಸೈಯ್ಯದ್ ಎಂಬ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದ. ಪತಿ ಓಡಿ ಹೋದ ನಂತರ ಪತ್ನಿ ವಾಣಿಶ್ರೀ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ, ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿದ್ದರು. ಆದರೆ, ಮಾಸಾಬಿ ಮಾತ್ರ ನನಗೆ ಬಸವರಾಜ್ ಬೇಕು ಅಂತಾ ಹೇಳಿದ್ದಳು. ಈಗ ಬೆಳಗಾವಿಗೆ ಬಂದು ಮಾಸಾಬಿ ಜೊತೆಗೆ ಬಸವರಾಜ್ ವಾಸ ಮಾಡತೊಡಗಿದ್ದ. ಆದರೆ, ಇಬ್ಬರೂ ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆಗ ವಾಣಿಶ್ರೀ, ಮಾಸಾಬಿಯನ್ನು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಮಧ್ಯೆ ಪರಸ್ಪರ ಹೊಡೆದಾಟವೇ ನಡೆದು ಹೋಗಿದೆ. ಪತಿ ಬಸವರಾಜ್ ನಿಂದಲೂ ವಾಣಿಶ್ರೀಯ ಮೇಲೆ ಹಲ್ಲೆ ನಡೆದಿದೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಮಧ್ಯೆಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.