ಬೆಂಗಳೂರು: ವ್ಯಕ್ತಿಯೋರ್ವ ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಮಾರತಹಳ್ಳಿಯ ಮಂಜುನಾತ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಖಿನ್ನತೆಗೆ ಒಳಗಾಗಿದ್ದ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಅತುಲ್ ಸುಭಾಷ್, ಇನ್ನೂ ಬಾಕಿ ಇದೆ (JUSTICE IS DUE) ಎಂದು ಬೋರ್ಡ್ ನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ನ್ನು NGO ವಾಟ್ಸಾಪ್ ಗ್ರೂಪ್ ಗೆ ಹಾಕಿ ಸಾಧ್ಯವಾದರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ.
ಆತುಲ್ ಗೆ ಮದುವೆಯಾಗಿದ್ದು, ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ಹಾಕಿದ್ದರು. ಹೀಗಾಗಿ ಆತುಲ್ ಕೌಟುಂಬಿಕ ಕಲಹದಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಹೆಂಡತಿ ಸುಳ್ಳು ಕೇಸ್ ಹಾಕಿದರೆ, ಹೋರಾಟ ಮಾಡುವ Save Indian family foundation ಎನ್ನುವ NGO ಕೂಡ ಸೇರಿದ್ದ. ಹೀಗಾಗಿ NGOದ ವಾಟ್ಸ್‌ಆ್ಯಪ್ ಗ್ರೂಪ್ಗೆ ಡೆತ್ ನೋಟ್ ಕಳಿಸಿದ್ದಾನೆ. ಅದರಲ್ಲಿ ಸಾಧ್ಯವಾದರೆ, ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ.
ಈತ ಡೆತ್ ನೋಟ್ ನಲ್ಲಿ ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು ಮತ್ತು ಗೇಟ್ ಲಾಕ್ ಮಾಡಬೇಕು. ಶಿವನಾಮವನ್ನು 100 ಬಾರಿ ಪಠಿಸಬೇಕು. ಫ್ರಿಡ್ಜ್ ಮೇಲೆ ಕಾರು ಬೈಕ್ ಕೀ ಇಡಬೇಕು. ರೂಮ್ ಕೀ ಫ್ರಿಡ್ಜ್ ಮೇಲಿಡಬೇಕು. ಡೆತ್ ನೋಟ್ ನ್ನು ಟೇಬಲ್ ಮೇಲಿಡಬೇಕು. ಡೆತ್ ನೋಟ್ ನ್ನು ಹೈಕೋರ್ಟ್, ಸುಪ್ರೀಂಕೋರ್ಟ್, ಆಫೀಸ್, ಕುಟುಂಬಸ್ಥರಿಗೆ ಮೇಲ್ ಕಳಿಸಬೇಕು. ನಾನು ಎಂಬುವುದನ್ನು ನಾಶ ಮಾಡಬೇಕು ಎಂದು ಬರೆದಿದ್ದಾನೆ.