ಇತ್ತೀಚೆಗೆ ಸಣ್ಣ ಸಣ್ಣ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ನಡೆಯುತ್ತಿವೆ. ಇಲ್ಲೊಬ್ಬ ವ್ಯಕ್ತಿ ಮದುವೆಗೆ ಮನೆಯವರು ಹುಡುಗಿ ಹುಡುಕುತ್ತಿಲ್ಲ ಎಂಬ ಕಾರಣಕ್ಕೆ ಹುಡುಗಿ ಹುಡುಕುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೈದರಾಬಾದ್ ನ ನಿರ್ಮಲ್ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಭೈಂಸಾ ಪಟ್ಟಣದ ಕುಂಟಾ ಬಡಾವಣೆಯ 24 ವರ್ಷದ ಇಮ್ರಾನ್ ಎಂಬಾತ ಮದುವೆಯಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಗೆಳೆಯರೆಲ್ಲ ಮದುವೆಯಾದರೂ ಈತನಿಗೆ ಮದುವೆಯಾಗಿರಲಿಲ್ಲ. ನನ್ನ ಮನೆಯವರು ಕೂಡ ನನ್ನ ಮದುವೆಗೆ ನಿರ್ಧಾರ ಮಾಡುತ್ತಿಲ್ಲ ಎಂದು ಮನನೊಂದು ಯುವಕ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಸ್ಥಳೀಯರು ಆತನ ಮೃತದೇಹವನ್ನು ಹೊರ ತೆಗೆದಿದ್ದಾರೆ.
TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. “ಮದುವೆಯಾಗಿಲ್ಲ ಎಂದು ಬೇಸರಗೊಂಡು ಗಡ್ಡೆನ್ನಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 24 ವರ್ಷದ ಯುವಕ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯರು ಕಾಲುವೆಯಲ್ಲಿ ತೇಲುತ್ತಿದ್ದ ಯುವಕನ ಮೃತದೇಹವನ್ನು ಮೇಲಕೆತ್ತುತ್ತಿರುವ ದೃಶ್ಯವನ್ನು ಕಾಣಬಹುದು.
ಬುಧವಾರ ಬೆಳಗ್ಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 80 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ.