ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮಹಾ ಎಡವಟ್ಟೊಂದು ಆಗಿದ್ದು ಪ್ರಯಾಣಿಕರು ಅಸಮಧಾನ ಹೊರಹಾಕಿದ್ದಾರೆ.
ಬಿಎಂಆರ್ ಸಿಎಲ್ ಅಧಿಕಾರಿಗಳ ಕಾರ್ಯದ ಬಗ್ಗೆ ಪ್ರಯಾಣಿಕರು, ಜನಪ್ರಧಿನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನಪ್ಪನ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಗಳಲ್ಲಿ ಬಹಳ ವ್ಯತ್ಯಾಸಗಳಾಗಿದ್ದು, ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕಾದ ಪ್ರಯಾಣಿಕ ಕೊನಪ್ಪನ ಅಗ್ರಹಾರಕ್ಕೆ ಟಿಕೆಟ್ ಪಡೆಯಬೇಕು. ಕೊನಪ್ಪನ ಅಗ್ರಹಾರಕ್ಕೆ ಹೋಗುವ ಪ್ರಯಾಣಿಕ ಎಲೆಕ್ಟ್ರಾನಿಕ್ ಸಿಟಿಗೆ ಟಿಕೆಟ್ ಪಡೆಯಬೇಕಿದೆ. ತಪ್ಪಿದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ.
ಈ ಬಗ್ಗೆ ಜನರು ಸೋಶಿಯಲ್ ಮೀಡಿಯಾ ಮೂಲಕ ನಿಲ್ದಾಣಗಳ ಸ್ಥಳ ನಿಗಧಿಯಲ್ಲಿ ಬಿಎಂಆರ್ ಸಿ ಎಲ್ ಅಧಿಕಾರಿಗಳ ಎಡವಟ್ಟಿನ ಬಗ್ಗೆ ಅಸಮಾಧನ ಹೊರ ಹಾಕ್ತಿದ್ದು, ಸಂಸದ ತೇಜಸ್ವಿ ಸೂರ್ಯ ಕೂಡಾ ಬಿಎಂಆರ್ ಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.