ಕಾರವಾರ : ಕಾರವಾರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಬೋಟ್ ನಲ್ಲಿದ್ದ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕಾರವಾರದ ಬೈತ್ಕೋಲ್ ಬಂದರಿನಲ್ಲಿ ನಡೆದಿದೆ.
ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿದ್ದ ಬೋಟ್ ನಲ್ಲಿದ್ದ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಕೊಂಡಿದೆ. ತಕ್ಷಣ ಮೀನುಗಾರರು ಸಿಲಿಂಡರ್ ನನ್ನು ಸಮುದ್ರಕ್ಕೆ ಎಸೆದಿದ್ದಾರೆ, ಸಮುದ್ರ ಮಧ್ಯದಲ್ಲಿ ಎಸೆದ ನಂತರವೂ ಸಿಲಿಂಡರ್ ನಲ್ಲಿ ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ನೂರಾರು ಮೀನುಗಾರರು ಆತಂಕಕ್ಕೊಳಗಾಗಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.



















