ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದ ಲಗ್ಗೆರೆ ಬಳಿ ಹುಚ್ಷು ಹಿಡಿದ ಬೀದಿ ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ಎರಗಿ ಕಚ್ಚಿರುವ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಲಗ್ಗೆರೆ ಮುಖ್ಯ ರಸ್ತೆಯಲ್ಲಿ ನಾಲ್ಕೈದು ಜನರ ಮೇಲೆ ಎರಗಿ ಮನಸೋ ಇಚ್ಛೆ ಕಚ್ಚಿದ ಹುಚ್ಚುನಾಯಿ, ಪುಟ್ಟ ಬಾಲಕಿ ಮೇಲೆ ಎರಗಿ ಎಡಗೈಗೆ ಕಚ್ಚಿದೆ. ಸದ್ಯ ಪೋಷಕರು ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಜಿಬಿಎಗೆ ಮಾಹಿತಿ ನೀಡಿದ್ದಾರೆ. ಶ್ವಾನ ಹಿಡಿಯುವ ತಂಡದಿಂದ ಬೀದಿ ನಾಯಿಯನ್ನು ಸೆರೆ ಹಿಡಿಯಲಾಗಿದೆ. ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗ್ತಿರೋದಕ್ಕೆ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಮ್ಮನ ಬಾಲ್ಯದ ‘ಕ್ರಶ್’ ಭೇಟಿ ಮಾಡಿಸಿದ ಮಗ.. ದಶಕಗಳ ಕನಸು ನನಸಾದಾಗ ಆನಂದಬಾಷ್ಪ ಸುರಿಸಿದ ತಾಯಿ!



















