ಗದಗ: ಅಪ್ಪ(Father)- ಮಗಳು (daughter) ಸಂಬಂಧ ಪವಿತ್ರ ಸಂಬಂಧ. ಅಪ್ಪ ರೆಪ್ಪೆಯಂತೆ ಮಗಳನ್ನು ಸಾಕುತ್ತಾನೆ. ಆದರೆ, ಇಲ್ಲೊಬ್ಬ ಕಾಮುಕ ಮಾತ್ರ ಮಗಳನ್ನೇ ಗರ್ಭವತಿ ಮಾಡಿದ್ದಾನೆ.
ಇಡೀ ಸಮಾಜ ತಲೆತೆಗ್ಗಿಸುವಂತ ಪೈಶಾಚಿಕ ಕೃತ್ಯ ನಡೆದಿರುವ ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗದಗ (Gadag) ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 55 ವರ್ಷದ ತಂದೆ 16 ವರ್ಷದ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಈಗ ಪೊಲೀಸರು ಕಾಮುಕ ತಂದೆ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
55 ವರ್ಷದ ತಂದೆ, ತನ್ನ 16 ವರ್ಷದ ಅಪ್ರಾಪ್ತ ಮಗಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಅಮ್ಮ ಕೆಲಸಕ್ಕೆ ಹೋದಾಗ ಮನೆಯಲ್ಲಿ ನಿರಂತರವಾಗಿ ಒಂದು ವರ್ಷದಿಂದ ತನ್ನ ನೀಚ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ಕುರಿತು ತಾಯಿ ದೂರು ನೀಡಿದ ನಂತರ ಈ ಘಟನೆ ಬಯಲಿಗೆ ಬಂದಿದೆ.