ಬೆಂಗಳೂರು: ಇತ್ತೀಚೆಗೆ ಕಾಮುಕರ ವಿಕೃತಿ ಮಿತಿ ಮೀರುತ್ತಿದ್ದು, ಈಗ ಬೆಂಗಳೂರಿನಲ್ಲಿ ನಡೆದಿರುವ ಘಟನೆಯೊಂದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಕಾಮುಕನೊಬ್ಬ ನಾಯಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಕಾಮುಕನೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ. ಆನಂತರ ನಾಯಿಯನ್ನು ಗಾಯಗೊಳಿಸಿದ್ದಾನೆ. ಇಬ್ಬರು ಕಾಮುಕರು ಸೇರಿ ಶ್ವಾನದ ಮರ್ಮಾಂಗ ಕೊಯ್ದು ಸಂಭೋಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಓರ್ವ ವ್ಯಕ್ತಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿದ್ಯಾ ಎಂಬುವ ಮಹಿಳೆ ಜಯನಗರದ ಸುತ್ತ ಮುತ್ತ ಬೀದಿ ನಾಯಿಗೆ ಊಟ ಹಾಕುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಶ್ವಾನದ ಜೊತೆ ಸಂಭೋಗ ಮಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಶ್ವಾನ ರಕ್ಷಿಸಿದ್ದಾರೆ. ಆನಂತರ ಶ್ವಾನ ಪ್ರಿಯರು ಅಲ್ಲಿಗೆ ತೆರಳಿದ್ದಾರೆ. ಆಗ ಕಾಮುಕ ಸಿಕ್ಕಿಬಿದ್ದಿದ್ದಾನೆ. ಆನಂತರ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಯಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.