ಚಿಕ್ಕೋಡಿ: ಸಿಮೆಂಟ್ ತುಂಬಿದ ಲಾರಿ ಪಲ್ಟಿಯಾಗಿ ಹಣ್ಣಿನ ಅಂಗಡಿ ಹಾಗೂ ಎರಡು ವಿದ್ಯುತ್ ಕಂಬಗಳು ಉರುಳಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣಲ್ಲಿ ನಡೆದಿದೆ.
ಪಟ್ಟಣದ ಅಥಣಿ ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ. ಬೆಳ್ಳಂಬೆಳಿಗ್ಗೆ ಜೋರಾಗಿ ಬಂದಿರುವ ಲಾರಿ ಕಂಟ್ರೋಲ್ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದಲ್ಲಿ ಇದ್ದ ಹಣ್ಣಿನ ಅಂಗಡಿ ಮೇಲೆ ಲಾರಿ ಉರುಳಿ ಅದೃಷ್ಟವಶಾತ್ ಅಂಗಡಿಯಲ್ಲಿ ಯಾರು ಇಲ್ಲದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಂಪೌಂಡಿಗೆ ಸ್ಕೂಟರ್ ಡಿಕ್ಕಿ.. ಓರ್ವ ಮಹಿಳೆ ಸಾವು



















