ಬೆಂಗಳೂರು | ಅಪಘಾತದಲ್ಲಿ ಮೂರು ವರ್ಷದ ಚಿರತೆಯೊಂದು ಬಲಿಯಾದ ಘಟನೆ ಬನ್ನೇರುಘಟ್ಟ ರಸ್ತೆ ನೈಸ್ ರೋಡ್‌ನಲ್ಲಿ ನಡೆದಿದೆ. ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.
ಬನ್ನೇರುಘಟ್ಟ ರಸ್ತೆ ನೈಸ್ ರೋಡ್‌ನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟಅರಣ್ಯ ಸಿಬ್ಬಂದಿ ಮೃತ ಚಿರತೆಯನ್ನ ಕಗ್ಗಲೀಪುರ ಅರಣ್ಯ ಕಚೇರಿಗೆ ಶಿಪ್ಟ್ ಮಾಡಿದ್ದಾರೆ.
ಇವತ್ತು ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಅಂತ್ಯಕ್ರಿಯೆ ನಡೆಯಲಿದೆ. ಹಾಗೆಯೇ ಕಗ್ಗಲೀಪುರ ಅರಣ್ಯ ಅಧಿಕಾರಿಗಳು ಚಿರತೆ ಸಾವಿನ ಬಗ್ಗೆ ತನಿಖೆ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಹಾಸ್ಟೆಲ್ ಯುವತಿಗೆ ದೌರ್ಜನ್ಯ.. ಯುವಕನ ಅಟ್ಟಹಾಸದ ವಿಡಿಯೋ ವೈರಲ್!



















