ವಿಜಯಪುರ : ಕೂಡಲ ಸಂಗಮ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ ಮಾಡಿರುವುದಕ್ಕೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ದೀಪ ಆರುವ ಮುನ್ನ ಹೆಚ್ಚು ಉರಿಯುತ್ತದೆ, ಅದಕ್ಕೆ ಅವನು ಉರಿಯುತ್ತಿದ್ದಾನೆ. ಇಡಿ ಸಮಾಜ ಸ್ವಾಮೀಜಿ ಜೊತೆಯಲ್ಲಿದೆ. ಸ್ವಾಮಿಜಿಯನ್ನು ಮಠದಿಂದ ಉಚ್ಛಾಟನೆ ಮಾಡಲು ಕಾಶಪ್ಪನವರ ಯಾರು? ಇದೇನು ರಾಜಕೀಯ ಪಕ್ಷವೇ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ಗದಗ ಜಿಲ್ಲೆ ಪ್ರಭಣ್ಣ ಹುಣಶಿಕಟ್ಟಿ, ಧಾರವಾಡದ ಅಸೂಟಿ ಎರಡು ಕುಟುಂಬದವರು ಸಮಾಜದ ಆಸ್ತಿನ ಪ್ರೇವೈಟ್ ಟ್ರಸ್ಟ್ ಮಾಡಿಕೊಂಡಿದ್ದಾರೆ. ಅವರ ಮಕ್ಕಳು, ಮೊಮ್ಮಕಳೆ ಅದರ ಟ್ರಸ್ಟ್ ಸದಸ್ಯರಿರುತ್ತಾರೆ. ಇದೀಗ ಟ್ರಸ್ಟ್ ಕಾಶಪ್ಪನವರಗೆ ವಹಿಸಿದ್ದಾರೆ. ಅದಕ್ಕೆ ಅವನು ಅಷ್ಟೊಂದು ಮಾತಾಡುತ್ತಿದ್ದಾನೆ ಎಂದು ಏಕವಚನದಲ್ಲೇ ಕೆಂಡಾಮಂಡಲರಾಗಿದ್ದಾರೆ.
ಆ ಟ್ರಸ್ಟ್ ನಲ್ಲಿ ಸ್ವಾಮಿಜಿಗಳ ಹೆಸರಿಲ್ಲ. ಆ ಟ್ರಸ್ಟ್ ನಲ್ಲಿ ಸ್ವಾಮಿಜಿ ಹೆಸರು ಇಲ್ಲ ಅಂದ ಮೇಲೆ ಅದರ ಮೇಲಿನ ಆಸೆ ಅವರಿಗೂ ಇಲ್ಲ. ನಾವು ಅದರ ಆಸೆ ಬಿಟ್ಟು ಬಿಡಿ ಎಂದು ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಹಾಸ್ಟೇಲ್ ಮಾಡುತ್ತೇವೆ. ಸ್ವಾಮೀಜಿ ಹಿಂದೆ ಇಡಿ ಸಮುದಾಯವಿದೆ ಎಂದವರು ಹೇಳಿದ್ದಾರೆ.
ಇನ್ನು, ಕೂಡಲಸಂಗಮ ಶ್ರೀ ವಿರುದ್ಧ ಹತ್ಯೆ ಸಂಚು ಎಂದು ಬೆಲ್ಲದ ಆರೋಪಿಸಿರುವುದಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಬೆಲ್ಲದ ಅವರನ್ನೆ ಕೇಳಿ. ಜಯಮೃತ್ಯುಂಜಯ ಸ್ವಾಮಿಜಿಗಳಿಗಾಗಿ 15 ಎಕರೆ ಜಮೀನು ತಗೆದುಕೊಂಡು ಹಾಸ್ಟೆಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ. ಅದರ ಬಗ್ಗೆ ಬುಧವಾರ ನಾನು , ಸಿಸಿ ಪಾಟೀಲ್ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೇವೆ. ಈ ಬಾರಿ ಯಾವುದೇ ರಾಜಕಾರಣಿ ಹೊಸ ಟ್ರಸ್ಟ್ ನಲ್ಲಿ ಇರಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್ ನಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.