ಟೊಕಿಯೊ : ಮಧ್ಯ ಜಪಾನ್‌ನ ಕಾರ್ಖಾನೆಯೊಂದರಲ್ಲಿ ದುಷ್ಕರ್ಮಿಯೋರ್ವ ಚಾಕು ಹಿಡಿದು ಮನಬಂದಂತೆ ಸಿಕ್ಕ ಸಿಕ್ಕವವರ ಮೇಲೆ ದಾಳಿ ನಡೆಸಿದ್ದು, ಸುಮಾರು 14 ಮಂದಿ ಗಾಯಗೊಂಡಿದ್ದಾರೆ. ಜತೆಗೆ ಕಾರ್ಖಾನೆಯಲ್ಲಿ ರಾಸಾಯನಿಕವನ್ನು ಸಿಂಪಡಿಸಿದ್ದಾನೆ ಎಂದು ವರದಿಯಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಕಿಯೊದ ಪಶ್ಚಿಮದಲ್ಲಿರುವ ಮಿಶಿಮಾದಲ್ಲಿರುವ ರಬ್ಬರ್ ಕಾರ್ಖಾನೆಯಲ್ಲಿ ದುಷ್ಕರ್ಮಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಸದ್ಯ ದಾಳಿ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಾಗಿದೆ. ದಾಳಿಕೋರ ಇದ್ದಕ್ಕಿದ್ದಂತೆ ಅಲ್ಲಿದ್ದವರಿಗೆ ಚುಚ್ಚಿದ್ದಲ್ಲದೇ, ರಾಸಾಯನಿಕವೊಂದನ್ನು ಸ್ಪ್ರೇ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯೊಕೊಹಮಾ ರಬ್ಬರ್ ಕೋ. ಕಂಪನಿ ಇದಾಗಿದ್ದು, ಇಲ್ಲಿ ಬಸ್ ಮತ್ತು ಟ್ರಕ್‌ಗಳ ಟೈರ್ ತಯಾರಿಸಲಾಗುತ್ತದೆ.
ಜಪಾನ್‌ನಲ್ಲಿರುವ ಕಠಿಣ ನಿಯಮಗಳ ಕಾರಣದಿಂದ ಅಪರಾಧಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆ. ಇದರ ಹೊರತಾಗಿಯೂ ಆಗಾಗ ದುಷ್ಕರ್ಮಿಗಳಿಂದ ಆಕ್ರಮಣ ನಡೆಯುತ್ತಿರುತ್ತದೆ. 2022ರಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ಸೇರಿದಂತೆ ಹಲವು ಬಾರಿ ದಾಳಿ ನಡೆದಿದೆ. 2023ರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಜಪಾನ್‌ನ ವ್ಯಕ್ತಿಯೊಬ್ಬನಿಗೆ ಮರಣ ದಂಡನೆ ವಿಧಿಸಲಾಗಿತ್ತು. ಸದ್ಯ ಈ ದಾಳಿಗೆ ಜಪಾನ್ ಬೆಚ್ಚಿ ಬಿದ್ದಿದ್ದು, ಅಧಿಕಾರಿಗಳು ತನಿಖೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಕನ್ನಡ ಮಂತ್ರಕ್ಕೆ ತೆಲುಗಿನವರ ವಿರೋಧ | ಭಾಷಾ ಸಂಘರ್ಷಕ್ಕೆ ಕಾರಣವೇನು?



















