ಮಹಾರಾಷ್ಟ್ರ: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತಿದೆ. ಆದರೆ, ಇಲ್ಲಿ ಕೂಸು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಪತಿಯ ಮೇಲಿನ ಕೋಪಕ್ಕೆ ಮಗುವನ್ನೇ ಕೊಲೆ ಮಾಡಿದ್ದಾರೆ. ಆನಂತರ ಮಗುವಿನ ಶವದೊಂದಿಗೆ ರಸ್ತೆಯಲ್ಲಿ ಸಂಚರಿಸಿದ್ದಾರೆ.
ಟ್ವಿಂಕಲ್ ರಾವುತ್ (23) ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಪತಿ ರಾಮ ಲಕ್ಷ್ಮಣ್ ರಾವುತ್ (24) ಎನ್ನಲಾಗಿದೆ. ಈ ದಂಪತಿ ಪೇಪರ್ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸೋಮವಾರ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಮಗು ಅಳಲು ಶುರು ಮಾಡಿದೆ. ಆಗ ಪತ್ನಿ, ಕೋಪದ ಭರದಲ್ಲಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.