ಮುಂಬೈ: ವೃದ್ಧ ರೋಗಿಯೊಬ್ಬರ ಮೇಲೆ ಆಸ್ಪತ್ರೆಯ ವಾರ್ಡ್ ಬಾಯ್ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ಆದ ಈ ವಿಡಿಯೋದಲ್ಲಿನ ಘಟನೆ ಎಲ್ಲಿ ನಡೆದಿದೆ ಎಂಬುವುದರ ಮಾಹಿತಿ ಇದುವರೆಗೂ ಸಿಕ್ಕಿಲ್ಲ. ಆದರೆ, ಸಾರ್ವಜನಿಕರು ಮಾತ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ.
ವೀಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ನಡೆದ ಸ್ಥಳದ ಸರಿಯಾದ ಲೋಕೇಷನ್ ಎಲ್ಲಿ ಎಂಬುವುದು ಪತ್ತೆಯಾಗಿಲ್ಲ. ಹಾಸ್ಪಿಟಲ್ ಸ್ಟಾಪ್‌ನಂತೆ ಸಮವಸ್ತ್ರ ಧರಿಸಿರುವ ಆತ ಬೆಡ್ ಮೇಲೆ ಮಲಗಿದ್ದ ರೋಗಿಯ ಬಳಿ ಬಂದು ಮತ್ತೊಂದು ಸೈಡ್‌ಗೆ ತನ್ನ ಕೃತ್ಯ ಕಾಣದಂತೆ ಕರ್ಟನ್ ನಿಂದ ಮುಚ್ಚುತ್ತಾನೆ ನಂತರ ರೋಗಿಯ ಸಮೀಪ ಬಂದು ಆತ ಹೊಟ್ಟೆಯ ಮೇಲೆ ತನ್ನ ಮೊಣಕೈನಿಂದ ಹೊಡೆಯುತ್ತಾನೆ. ಅಷ್ಟರಲ್ಲಿ ಆತನಿಗೆ ಅಲ್ಲಿ ಸಿಸಿಟಿವಿ ಇರುವುದು ಕಾಣಿಸಿದ್ದು, ಕ್ಷಣದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
ಫ್ರೊಫೆಸರ್ ಸುಧಾಂಶು ಎಂಬುವವರು ಈ ವೀಡಿಯೋ ಹರಿಬಿಟ್ಟಿದ್ದಾರೆ.