ಬೆಳಗಾವಿ: ಹಿಂದೂ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು ಎಂದು ಶ್ರೀಶೈಲ ಪೀಠದ ಧರ್ಮಾಧಿಕಾರಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದ್ದಾರೆ.
ತಾಲೂಕಿನ ಮಾಂಜರಿ ಗ್ರಾಮದ ಕಾಡಸಿದ್ದೇಶ್ವರ ಮಠದಲ್ಲಿ ಧರ್ಮಸಭೆ ಹಾಗೂ ಸಾಧಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಭಾರತೀಯರು ಅಧ್ಯಾತ್ಮಿಕ ವಿಚಾರಗಳಲ್ಲಿ ಗೌರವ, ಶ್ರದ್ಧೆ ಮತ್ತು ಭಕ್ತಿ ಹೊಂದಿದ ಜನರು. ಪಾಶ್ಚಾತರು ದೇವರಿಗಿಂತ ಹೆಚ್ಚಾಗಿ ತಮ್ಮ ದೇಹವನ್ನು ಪ್ರೀತಿಸುತ್ತಾರೆ. ಆದರೆ ಇಡೀ ಪ್ರಪಂಚದಲ್ಲಿ ಭಾರತೀಯರು ಇದಕ್ಕೆ ಅಪವಾದವಾಗಿದ್ದಾರೆ. ದೇಹಕ್ಕಿಂತ ದೇವರನ್ನು ಪ್ರೀತಿಸುವ ಉದಾತ್ತ ಮನೋಭಾವ ನಮ್ಮದು’. ಇತ್ತೀಚೆಗೆ ಹವ್ಯಕರ ಜನಸಂಖ್ಯೆ ಕೂಡ ಕ್ಷೀಣಿಸುತ್ತಿದೆ.
’30 ವರ್ಷಗಳ ಹಿಂದೆ ಇದ್ದ ಜನಸಂಖ್ಯೆ ಇಂದು ಅದರ ಅರ್ಧದಷ್ಟಿಲ್ಲ. ದೇಶಕ್ಕೆ ಅವಶ್ಯ ಇಲ್ಲದವರು ಜನಸಂಖ್ಯಾ ನಿಯಂತ್ರಣ ಕಾಯಿದೆ ಪಾಲಿಸುತ್ತಿಲ್ಲ. ಆದರೆ, ಇಡೀ ಜಗತ್ತಿಗೆ ಅವಶ್ಯವಾಗಿ ಬೇಕಾದ ಹವ್ಯಕರು ಮದುವೆ, ಮಕ್ಕಳಿಂದ ದೂರವಾಗುತ್ತಿದ್ದಾರೆ’ ಎಂದಿದ್ದಾರೆ.