ಚಿತ್ರದುರ್ಗ: ಲವ್ ಜಿಹಾದ್ ಗೆ ಒಳಗಾಗಿದ್ದ ಯುವತಿ ಮೇಲೆ ವಿತೃತಿಯ ದಾಳಿಯಾಗಿದ್ದು, ಇಮ್ಮಡಿ ಸಿದ್ದರಾಮೇಶ್ವರ ಶ್ರೀ ನೆರವು ನೀಡಿದ್ದಾರೆ.
ಯುವತಿಯ ವೈದ್ಯಕೀಯ ಚಿಕಿತ್ಸೆಗೆ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ನೆರವು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗುಡೂರು ಗ್ರಾಮದ ನೇತ್ರಾವತಿ ಎಂಬ ಯುವತಿಯ ಮೇಲೆ ಪೆಟ್ರೋಲ್ ಸುರಿದು ದುರುಳರು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.
ಇದರಿಂದಾಗಿ ನೇತ್ರಾವತಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದರು. ಈ ವಿಷಯ ತಿಳಿದ ಇಮ್ಮಡಿ ಶ್ರೀಗಳು ಯುವತಿಯ ಚಿಕಿತ್ಸೆಗಾಗಿ 1 ಲಕ್ಷ ರೂ. ಚೆಕ್ ನೀಡಿದ್ದಾರೆ. ಇಳಕಲ್ ಮಹಿಳಾ ಕೇಂದ್ರಕ್ಕೆ ತೆರಳಿದ ಶ್ರೀಗಳು ಅಲ್ಲಿ ಚೆಕ್ ವಿತರಿಸಿದರು. ಈ ವೇಳೆ ತಂಗಡಗಿಯ ಅನ್ನದಾನ ಭಾರತಿ ಅಪ್ಪಣ್ಣ ಶ್ರೀ, ಕುಂಬಾರ ಗುಂಡಯ್ಯ ಶ್ರೀ, ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಶ್ರೀ ಇದ್ದರು.