ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರಿದಿದೆ. ಈಗಾಗಲೇ ಹಾಸನದಲ್ಲೂ ಹಾರ್ಟ್ ಆಟ್ಯಾಕ್ ನಿಂದ್ ಹಲವು ಮಂದಿ ಸಾವನ್ನಪ್ಪಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಾಸನದಲ್ಲಿ 20 ರಿಂದ 30 ಜನರು ಹೃದಯಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರು ಕೂಡ ಹಾಸನಕ್ಕೆ ಹೋಗಿ ಸ್ಥಿತಿಯನ್ನು ನೋಡಲಿದ್ದಾರೆ. ಆದರೆ ಉಸ್ತುವಾರಿ ಸಚಿವರು ಎರಡು ಮೂರು ತಿಂಗಳಾದರೂ ಹಾಸನಕ್ಕೆ ಹೋಗಿಲ್ಲ.
ಇಷ್ಟೊಂದು ಸಾವು ನೋವುಗಳು ಆಗುತ್ತಿದ್ದರೂ ಯಾಕೆ ಹಾಸನಕ್ಕೆ ಹೋಗುತ್ತಿಲ್ಲ? ಇದರ ಅರ್ಥವೇನು? ಒಂದು ರೀತಿಯಲ್ಲಿ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ಪಾಲಿಗೆ ಸರ್ಕಾರ ಬದುಕಿದ್ದರೂ ಸತ್ತಂತಿದೆ ಎಂದು ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ರಾಜಣ್ಣ ವಿರುದ್ಧ ಕಿಡಿಕಾರಿದ್ದಾರೆ.