ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದ್ದು, ನಾಡೋಜ ಗೊ ರು ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಕನ್ನಡದ ಜಾತ್ರೆ ಸಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಉದ್ಘಾಟಿಸಿ ಮಾತನಾಡಿದ ಗೊ.ರು ಚನ್ನಬಸಪ್ಪ, ಕನ್ನಡ ಮಾಧ್ಯಮವೇ ರಾಜ್ಯದಲ್ಲಿ ಕಡ್ಡಾಯವಾಗಬೇಕು. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರತಿಯೊಬ್ಬರೂ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಬೇಕು.
ಎಲ್ಲರಿಗೂ ಶಿಕ್ಷಣ ನೀಡುವುದನ್ನು ಸರ್ಕಾರ ಕರ್ತವ್ಯವಾಗಿ ಪರಿಗಣಿಸಬೇಕು. ಒಬ್ಬನೇ ವಿದ್ಯಾರ್ಥಿ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು. ಆಧುನಿಕ ತಂತ್ರಜ್ಞಾನವನ್ನ ಭಾಷೆಯ ಬೆಳೆವಣಿಗೆಗೆ ಹೇಗೆ ಬೆಳಸಿಕೊಳ್ಳಬೇಕು ಎಂಬುವುದರ ಚಿಂತನ ನಡೆಯಬೇಕು. ಯಾವ ವಿಚಾರದಲ್ಲೂ ಕನ್ನಡ ಹಾಗೂ ಕನ್ನಡಿಗರು ಹಿಂದೆ ಬೀಳಬಾರದು ಎಂದು ಹಾರೈಸಿದ್ದಾರೆ.
ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಬರುತ್ತಿಲ್ಲ ಎಂಬುವುದು ಕೂಡ ನೋವಿನ ಸಂಗತಿ. ಸಿಎಂ ಸಿದ್ದರಾಮಯ್ಯ ಅವರು ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಇದು ಉತ್ತಮ ಬೆಳವಣಿಗೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಿಎಂ ಧ್ವನಿ ಎತ್ತಿರುವುದರಲ್ಲಿ ಸತ್ಯಾಂಶವಿದೆ. ಈ ಮಾತುಗಳನ್ನು ರಾಜಕೀಯವಾಗಿ ನೋಡಬಾರದು ಎಂದು ಹೇಳಿದ್ದಾರೆ.