ಬೆಂಗಳೂರು: ಬೆಂಗಳೂರಿನಲ್ಲಿ ಹೊರ ರಾಜ್ಯದ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲವರಂತೂ ಪುಂಡಾಟ ಮೆರೆಯುತ್ತಿರುವುದು ಕೂಡ ಆಗಾಗ ಬೆಳಕಿಗೆ ಬರುತ್ತಿವೆ.
ಇತ್ತೀಚೆಗೆ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೊರ ರಾಜ್ಯದ ವ್ಯಕ್ತಿ ಕನ್ನಡಿಗನ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ಹಿಂದಿ ಮಾತನಾಡುವಂತೆ ಆವಾಜ್ ಕನ್ನಡಿಗನಿಗೆ ಅವಾಜ್ ಹಾಕಿ ಕಿರಿಕ್ ಮಾಡಿದ್ದಾನೆ. ಇದು ಬೆಂಗಳೂರು ಇರಬಹುದು. ಕನ್ನಡ ಅಲ್ಲ. ಹಿಂದಿ ಮಾತಾಡು ಎಂದು ಕಿರಿಕ್ ಮಾಡಿದ್ದಾನೆ.
ಓಲ್ಡ್ ಏರ್ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯದ ಎಸ್ ಎನ್ ಎಸ್ ಆರ್ಕೆಡ್ ನಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹೊರ ರಾಜ್ಯದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



















