ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದರೂ ಇಂದಿಗು ಜನಮಾನಸದಲ್ಲಿದ್ದಾರೆ. ಅವರ ಅಭಿಮಾನ ಸಾಗರೋತ್ತರವಾಗಿ ಬೆಳೆದಿದೆ. ಈ ಮಧ್ಯೆ ವಿದೇಶಿ ಅಭಿಮಾನಿಯೊಬ್ಬರು ಅಪ್ಪುಗಾಗಿ ಹಾಡು ಹಾಡಿದ್ದಾರೆ.
ಮೇಲಿನ ಅಭಿಮಾನಕ್ಕಾಗಿ ಬೆಂಗಳೂರಿನ ಪಬ್‌ವೊಂದರಲ್ಲಿ ವಿದೇಶಿ ಮಹಿಳೆ ಹಾಡು ಹಾಡಿದ್ದಾರೆ. ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಹಾಡಿದ್ದಾರೆ. ಈಗ ಅಪ್ಪು ಅಭಿಮಾನಿಗಳು ವಿದೇಶಿ ಮಹಿಳೆಯ ಪ್ರೀತಿ ಕಂಡು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಸದ್ಯ ವಿದೇಶಿ ಮಹಿಳೆ ಹಾಡಿರುವ ಹಾಡು ವೈರಲ್ ಆಗುತ್ತಿದೆ. ವಿದೇಶಿ ಮಹಿಳೆ ಹಾಡುವಾಗ ಪಬ್‌ನಲ್ಲಿ ಸೇರಿದ್ದ ಜನರು ಕೂಡ ಹಾಡು ಕೇಳಿ ಎಂಜಾಯ್ ಮಾಡಿದ್ದಾರೆ. ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ಪೂರ್ತಿ ಅಪ್ಪು ಹಾಡುಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.
ಈ ಮಧ್ಯೆ ಮಾರ್ಚ್ 14ರಂದು ಪುನೀತ್ ರಾಜ್‌ಕುಮಾರ್ ನಟಿಸಿದ್ದ ಅಪ್ಪು ಸಿನಿಮಾ ಮರುಬಿಡುಗಡೆ ಆಗುತ್ತಿದೆ. ನಟನ 50ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ‘ಅಪ್ಪು’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.