ಬೆಂಗಳೂರು: ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಿಪೂರ್ಣವಾಗಿ ಯಕ್ಷಗಾನ ಕಲೆಯನ್ನು ತೆರೆಗೆ ಏರಿಸುವ ಪ್ರಯತ್ನವನ್ನು ಹೊಂಬಾಳೆ ಸಂಸ್ಥೆ ಮಾಡುತ್ತಿದ್ದು, ಈ ಕುರಿತ ಚಿತ್ರ ವೀರ ಚಂದ್ರಹಾಸ ಬಿಡುಗಡೆಗೆ ಸಿದ್ಧವಾಗಿದೆ.

ವೀರ ಚಂದ್ರಹಾಸ ಸಿನಿಮಾವನ್ನು ನಮ್ಮ ಹೆಮ್ಮೆಯ “ಹೊಂಬಾಳೆ” ಸಂಸ್ಥೆ ಅಧಿಕೃತವಾಗಿ ಪ್ರಸ್ತುತಪಡಿಸುತ್ತಿದೆ. ಈ ಸಿನಿಮಾ ಏಪ್ರಿಲ್ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕೆಂಬ ರವಿ ಬಸ್ರೂರು ಅವರ ಕನಸಿಗೆ ಹೊಂಬಾಳೆ ಸಾಥ್ ನೀಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.