ಯಾದಗಿರಿ: ಸುರಪುರ ತಾಲ್ಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಕುಟುಂಬದ ಸದಸ್ಯರ ನಡುವೆ ಕ್ಷುಲಕ್ಕ ಕಾರಣಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನಡೆದಿದೆ.
ಜಮೀನಿನ ದಾರಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಪರಮೇಶಿ ತಂದೆ ಮಲ್ಲಣ್ಣ ಗಿಂಡಿ (27) ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ ವೇಳೆಯಲ್ಲಿ ಮತ್ತೊಬ್ಬ ಕುಟುಂಬ ಸದಸ್ಯನಿಗೂ ಗಂಭೀರ ಗಾಯವಾಗಿದೆ ಮತ್ತು ಅವರನ್ನು ತುರ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಒ ಪ್ರಕಾರ, ಹಲ್ಲೆಕಾರರು ಮಲ್ಲಣ್ಣನ ತಲೆಗೆ ಕಲ್ಲು ಎತ್ತಿಹಾಕಿದರೆಂದು ತಿಳಿದುಬಂದಿದೆ. ಘಟನೆ ಬಗ್ಗೆ ಸ್ಥಳಕ್ಕೆ ಕೆಂಭಾವಿ ಪೋಲಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಹಾಸನದಲ್ಲಿ ಡೀಸೆಲ್ ಟ್ಯಾಕರ್ – ಕಾರಿನ ಮಧ್ಯೆ ಆಕ್ಸಿಡೆಂಟ್.. ತಪ್ಪಿದ ಭಾರೀ ಅನಾಹುತ


















