ಛತ್ತೀಸ್ಗಢ: ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ಹೋಗಿ, ಮಹಿಳೆ ಆತ್ಮರಕ್ಷಣೆಗಾಗಿ ಗಂಡನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾಳೆ. ಕಲ್ಲಿನೇಟಿಗೆ ಗಂಡ ಪ್ರಾಣ ಬಿಟ್ಟಿರುವ ಘಟನೆ ಕಟ್ಘೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತುಮನ್ ಅರಣ್ಯ ಗ್ರಾಮದಲ್ಲಿ ನಡೆದಿದೆ.
40ವರ್ಷ ಮನ್ಹರನ್ ಯಾದವ್ ಸಾವನ್ನಪ್ಪಿದ ಗಂಡ, 37 ವರ್ಷದ ಕವಿತಾ ಯಾದವ್ ಹತ್ಯೆ ಮಾಡಿದ ಪತ್ನಿ. ಗಂಡ ಸಾವನ್ನಪ್ಪಿದ ಬಳಿಕ ಮೃತ ದೇಹವನ್ನು ಈ ಮಹಿಳೆ ಗುರುವಾರ ಇಡೀ ರಾತ್ರಿ ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಶುಕ್ರವಾರ ಬೆಳಗ್ಗೆ ಈ ಘಟನೆ ಗ್ರಾಮಸ್ಥರಿಗೆ ಗೊತ್ತಾಗಿದೆ. ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ವಿಧಿ ವಿಜ್ಞಾನ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ. ಯಾದವ್ ಮದ್ಯದ ಚಟಕ್ಕೆ ಒಳಗಾಗಿದ್ದು, ಇದರಿಂದ ಈ ಗಲಾಟೆ ನಡೆದಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತುಮನ್ ಗ್ರಾಮದ ಗಂಡ – ಹೆಂಡತಿ ಇಬ್ಬರೂ ಆಗಾಗ್ಗೆ ಮದ್ಯದ ಅಮಲಿನಲ್ಲಿ ಜಗಳವಾಡುತ್ತಿದ್ದರು. ನಿನ್ನೆ ರಾತ್ರಿಯೂ ಇದೇ ರೀತಿಯ ಘಟನೆ ಸಂಭವಿಸಿದ್ದು, ನಂತರ ಪತ್ನಿ ತನ್ನ ಗಂಡನ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಿದ್ದಾಳೆ. ಹೀಗಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಷಯ ಗೊತ್ತಾದ ಬಳಿಕ ಪೊಲೀಸರು ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಬಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಆರೋಪಿ ಪತ್ನಿಯನ್ನು ಸಹ ಬಂಧಿಸಲಾಗಿದೆ ಎಂದು ಎಎಸ್ಪಿ ನಿತೀಶ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬ್ರಹ್ಮಾವರ | ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ತೆಂಗಿನ ಎಣ್ಣೆ ಮಿಲ್



















