ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ದೊಡ್ಡ ಜಗಳವೇ ನಡೆದಿರುವ ಘಟನೆ ನಡೆದಿದೆ.
ರಸ್ತೆ ಬದಿಯ ಅಂಗಡಿ ಬಳಿ ಊಟಕ್ಕೆಂದು ಹೋಗಿದ್ದ ಯುವಕರ ಗುಂಪಿನ ಮೇಲೆ ಕೆಲ ಸ್ಥಳೀಯ ಕಿಡಿಗೇಡಿಗಳು ರಾಡ್, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆಯೊಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾದಾ ಪಟೇಲ್, ಫೇರೋಜ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಡಿಸೆಂಬರ್ 19 ರ ರಾತ್ರಿ ವೇಳೆ ಮಂಜುನಾಥ್, ಅನಿಲ್, ತಿಮ್ಮಣ್ಣ ಸೇರಿದಂತೆ ನಾಲ್ಕೈದು ಜನ ಹುಡುಗರು ಊಟಕ್ಕೆಂದು ಲಿಂಗಸುಗೂರು ಪಟ್ಟಣದ ಪಕ್ಕದಲ್ಲಿರುವ ಕಸಬಾ ಲಿಂಗಸುಗೂರು ಗ್ರಾಮದವರು ಎನ್ನಲಾಗಿದೆ. ಇವರು ಕೆಲಸದ ನಿಮಿತ್ತವಾಗಿ ಲಿಂಗಸುಗೂರಿಗೆ ಬಂದಿದ್ದರು.
ಈ ವೇಳೆ ರಾತ್ರಿ ಊಟಕ್ಕೆಂದು ಮಸ್ಕಿ ರಸ್ತೆಯ ತಳ್ಳುವ ಬಂಡಿ ಬಳಿ ಬಂದಿದ್ದಾರೆ. ಈ ವೇಳೆ ಯುವಕರ ಗುಂಪಿನ ತಿಮ್ಣ್ಣ ತಳ್ಳುವ ಬಂಡಿಯಿದ್ದ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ಅಲ್ಲಿದ್ದ ಸ್ಥಳೀಯರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಹೊಡೆದಾಟವೇ ನಡೆದಿದೆ.
ಸ್ನೇಹಿತ ತಿಮ್ಮಣ್ಣಗೆ ಹೊಡೆಯುತ್ತಿದ್ದಂತೆ ಮಂಜುನಾಥ್, ಸುನೀಲ್ ಹಾಗೂ ಇತರರರು ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಕೆಲವರು ಬೇರೆಯವರನ್ನು ಫೋನ್ ಮಾಡಿ ಕರೆಯಿಸಿ ರಸ್ತೆಯಲ್ಲಿ ಅಟ್ಟಾಡಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ರಾಡ್, ಚಾಕು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.