ಕಲಬುರಗಿ: ಮಂಗಳಮುಖಿಯರ ಕಿರುಕುಳ, ಹಲ್ಲೆ ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದ್ದವು. ಆದರೆ, ಈಗ ಮಂಗಳಮುಖಿಯರಿಬ್ಬರ ಜಡೆ ಜಗಳ ನಡೆದಿರುವ ಕುರಿತು ವರದಿಯಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಮಾಡಿರುವ ವ್ಯಕ್ತಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ, ಗುರು ದತ್ತಾತ್ರೇಯನ ಸನ್ನಿಧಿಯಲ್ಲಿ ಮಂಗಳ ಮುಖಿಯರು ಪರಸ್ಪರ ಜಡೆ ಹಿಡಿದುಕೊಂಡು ಹೊಡೆದಿದ್ದಾರೆ. ಜಡೆ ಹಿಡಿದುಕೊಂಡು ನೆಲಕ್ಕೆ ಉರುಳಾಡಿ ಹೊಡೆದಾಡುತ್ತಿದ್ದರು ಯಾರೂ ಬಿಡಿಸುವ ಧೈರ್ಯ ಮಾಡಿಲ್ಲ. ಇವರನ್ನು ಬಿಡಿಸುವ ಧೈರ್ಯವನ್ನು ಜನಸಾಮಾನ್ಯರು ಮಾಡಿಲ್ಲ. ಏಕೆಂದರೆ ಜಗಳ ಬಿಡಿಸಲು ಇವರನ್ನು ಮುಟ್ಟಿದರೆ ಅವರ ಮೈಮೇಲೆಯೇ ಬೀಳುತ್ತಾರೆ ಎಂಬ ಭಯ ಅಲ್ಲಿನ ಜನರಿಗೆ. ಹೀಗಾಗಿ ಎಲ್ಲರೂ ನಿಂತು ಮೌನದಿಂದ ಜಗಳ ನೋಡಿದ್ದಾರೆ.
ಸಂವಿಧಾನಬದ್ಧವಾಗಿ ಸಿಕ್ಕಿದ್ದ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಿದೆಯೇ? ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಆದರೆ, ಕೆಲವರು ಮಾತ್ರ ಇದಕ್ಕೆ ಅಪವಾದವೆಂಬಂತೆ ಜನ ಸಾಮಾನ್ಯರಂತೆ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ವೈರಲ್ ವಿಡಿಯೋದಲ್ಲಿ ಬರೆದುಕೊಳ್ಳಲಾಗಿದೆ.
ಅಫಜಲಪುರ ತಾಲ್ಲೂಕಿನ ಗಾಣಗಾಪುರಲ್ಲಿರುವ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಕೂಡ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೂಡ ತಿಳಿದು ಬಂದಿದೆ.