ಬೈಂದೂರು: ಭಾರೀ ಮಳೆಗೆ ನಾವುಂದ ಗ್ರಾಮದ ಅರೆಹೊಳೆಯಲ್ಲಿ 50 ವರ್ಷದ ಹಳೆಯ ಮರ ಧರೆಗೆ ಉರುಳಿರುವ ಘಟನೆ ನಡೆದಿದೆ.
ಗುರುವಾರ ನುಸುಕಿನ ಜಾವಾ ಬೆಂಬಿಡದೆ ಸುರಿದ ಗಾಳಿ ಮಳೆಗೆ 50 ವರ್ಷದ ಹಳೆಯ ಮರವೊಂದು ಧರೆಗೆ ಉರುಳಿದೆ. ಅಲ್ಲೇ ಹತ್ತಿರದಲ್ಲಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ನೆಲಸಮವಾಗಿವೆ. ಅದೇ ದಾರಿಯಲ್ಲಿ ದಿನದ ಸಮಯದಲ್ಲಿ ಹಲವಾರು ಜನರು ಪ್ರಯಾಣ ಬೆಳೆಸುತ್ತಿದ್ದೂ, ಅದೃಷ್ಟವಶಾತ್ ಈ ಘಟನೆ ರಾತ್ರಿ ನೆಡೆದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳೀಯರು ಮತ್ತು ಲೈನ್ ಮ್ಯಾನ್ ಸಿಬ್ಬಂದಿಗಳು ತೆರವಿನ ಕಾರ್ಯದಲ್ಲಿ ತೊಡಗಿದ್ದಾರೆ.