ನಾಯಿ ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದರೆ ಸಾಕು ಅದು ನಿಯತ್ತಾಗಿ ಇರುತ್ತದೆ. ತನ್ನವರಿಗಾಗಿ ಅದು ಜೀವವನ್ನೇ ಪಣಕಿಟ್ಟು ಹೋರಾಡುತ್ತದೆ. ಇಂತಹುದೇ ಘಟನೆಯೊಂದು ಈಗ ವೈರಲ್ ಆಗುತ್ತಿದೆ.
ನಾಯಿಯೊಂದು ಅಪಹರಣಕ್ಕೆ ಒಳಗಾಗಬೇಕಿದ್ದ ಬಾಲಕಿಯನ್ನು ರಕ್ಷಿಸಿದ್ದು, ನಾಯಿಯ ಮಹಾನ್ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೊದಲ್ಲಿ ಬಾಲಕಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಬಾಲಕಿಯ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಅಪಹರಣಕಾರ, ಮಗುವನ್ನು ಅಪಹರಿಸಲು ಹಿಂದಿನಿಂದ ಬಂದಿದ್ದಾನೆ. ಅಲ್ಲೇ ಹತ್ತಿರದಲ್ಲಿ ಸಾಕು ನಾಯಿ ಮಲಗಿತ್ತು. ಅದು ಕೂಡಲೇ ಮಗುವಿನ ಹತ್ತಿರ ಬಂದು ಅವಳನ್ನು ಹಿಡಿದುಕೊಳ್ಳುತ್ತಿದ್ದಂತೆ ನಾಯಿ ಬೊಗಳುತ್ತಾ ಓಡಿಹೋಗಿ ಅವನ್ನು ಕಚ್ಚಿ ಹಿಡಿದುಕೊಂಡಿದೆ. ಇದರಿಂದ ಗಾಬರಿಗೊಂಡ ಕಿಡ್ನಾಪರ್ ಆತುರದಿಂದ ಸ್ಥಳದಿಂದ ಪರಾರಿಯಾಗಿದ್ದಾನೆ.
ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ನಾಯಿಯ ಕಾರ್ಯ ಈಗ ಎಲ್ಲರ ಮನ ಗೆದ್ದಿದೆ. ನಾಯಿಗಳ ರಕ್ಷಣಾತ್ಮಕ ಸ್ವಭಾವ ಮತ್ತು ಅವುಗಳು ತೋರುವ ಕಾಳಜಿಯನ್ನು ನೋಡಿದರೆ ನಾಯಿಗಳು ಪೋಷಕರೆಂಬಂತೆ ಭಾಸವಾಗುತ್ತದೆ. ನಾಯಿಯೇ ಮನುಷ್ಯನ ನಿಜವಾದ ರಕ್ಷಕ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಂತಹ ನಾಯಿಗಳ ಸಾಹಸದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಜನರು ನಾಯಿಗಳಿಗೆ ಧನ್ಯವಾದ ಹೇಳುತ್ತಿದ್ದಾರೆ.