ಹಾಸನ: ಹರಕೆ ತೀರಿಸಲು ಬೆಂಕಿ ಉಂಡೆಯಲ್ಲಿ ಹೊಡೆದಾಡಿಕೊಳ್ಳುವ ವಿಭಿನ್ನ ಆಚರಣೆಯೊಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ಕಂಡುಬಂದಿದೆ.
ಆಂಜನೇಯನ ಭಕ್ತರು ಮೈಮೇಲೆ ಬೆಂಕಿ ಎರಚಿಕೊಂಡು, ಬೆಂಕಿಯನ್ನೆ ಹಾಯ್ದು ಹರಕೆ ತೀರಿಸುವ ವಿಶೇಷ ಆಚರಣೆ ಪಾಲಿಸುತ್ತಾರೆ. ಜಾನುವಾರುಗಳನ್ನು ಬೆಂಕಿಯಲ್ಲಿ ಹಾಯಿಸುವುದನ್ನು ನೋಡಿದ್ದೇವೆ. ಆದರೆ ಮನುಷ್ಯರೇ ಜಾನುವಾರುಗಳ ರೀತಿ ಬೆಂಕಿ ಹಾಯುವ ಪದ್ದತಿ ಇದಾಗಿದೆ.

ಬೆಂಕಿ ಹಾಯುವ ಹರಕೆ ಹೊತ್ತ ಭಕ್ತರು, ಬಳಿಕ ಬೆಂಕಿ ಉಂಡೆಗಳನ್ನು ಲಂಕಾ ದಹನದ ಸ್ಥಳದಿಂದ ದೇವಾಲಯದ ಮೇಲ್ಭಾಗ ಮತ್ತು ದೇವಾಲಯದ ಮೇಲಿಂದ ಲಂಕಾದಹನದ ಸ್ಥಳಕ್ಕೆ ಎಂದು ಮೈಮೇಲ ಎರಚಾಡುತ್ತಾರೆ. ಈ ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ಆಂಜನೇಯ ಸನ್ನಿಧಿಯಲ್ಲಿ ಹೂವಿನ ಪ್ರಸಾದವಾಗುತ್ತದೆ ಎಂಬ ಪ್ರತೀತಿ ಇದೆ.
ಇಲ್ಲಿ, ವಿವಾಹ, ಸಂತಾನ ಭಾಗ್ಯ, ಚರ್ಮರೋಗ ಸಮಸ್ಯೆ, ಜಮೀನು ವ್ಯಾಜ್ಯ, ವ್ಯಾಪಾರಾಭಿವೃದ್ದಿ ಸೇರಿದಂತೆ ಹಲವು ರೀತಿಯ ಹರಕೆಗಳನ್ನು ಹೊತ್ತ ಭಕ್ತರು ಇಲ್ಲಿ ಹರಕೆ ತೀರಸುತ್ತಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದ ಬೆದರಿಕೆ | ರಕ್ಷಣೆ ಕೋರಿ ಪೊಲೀಸರ ಮೊರೆ



















