ಟೆಲ್ ಅವೀವ್: ಗಾಜಾದ (Gaza) ರಫಾದಲ್ಲಿ (Rafah) ವಿನಾಶಕಾರಿ ಸ್ಫೋಟ ಸಂಭವಿಸಿದ ಪರಿಣಾಮ 8 ಜನ ಇಸ್ರೇಲಿ (Israeli Soldiers) ಸೈನಿಕರು ಬಲಿಯಾಗಿದ್ದಾರೆ.
ಬೀಟ್ ಜಾನ್ ನಿಂದ ಯುದ್ಧ ಇಂಜಿನಿಯರಿಂಗ್ ಕಾರ್ಪ್ಸ್‌ನ 601 ನೇ ಬೆಟಾಲಿಯನ್‌ನ ಡೆಪ್ಯೂಟಿ ಕಂಪನಿ ಕಮಾಂಡರ್ ಸಿಪಿಟಿ ವಾಸೆಮ್ ಮಹಮೂದ್ (23) ಕೂಡ ಬಲಿಯಾಗಿದ್ದಾರೆ. ಇನ್ನುಳಿದ 7 ಜನ ಸೈನಿಕರ ಕುರಿತು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ ನಂತರ ಬಹಿರಂಗಪಡಿಸಲಾಗುವುದು ಎಂದು ಐಡಿಎಫ್ ಹೇಳಿದೆ.
ಫಾದ ಟೆಲ್ ಸುಲ್ತಾನ್ ನೆರೆಹೊರೆಯಲ್ಲಿ ಹಮಾಸ್ ವಿರುದ್ಧ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಬೆಳಗ್ಗೆ 5 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಾವಲು ಪಡೆಯಲ್ಲಿ ಐದನೇ ಅಥವಾ ಆರನೇ ವಾಹನವಾಗಿ ಇರಿಸಲಾದ ನೇಮರ್ ಸಿಇವಿ ಸ್ಫೋಟಕ್ಕೆ ಒಳಗಾಗಿದೆ.
ಆದರೆ, ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಹಮಾಸ್ ಬಂಡುಕೋರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 307 ಜನ ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.
