ಬೀದರ್: ಕಟುಕ ತಾಯಿಯೊಬ್ಬಳು ಕಸದ ತೊಟ್ಟಿಯಲ್ಲಿ ನವಜಾತ ಶಿಶುವನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಔರಾದ್ ಪಟ್ಟಣದ ಖಾಸಗಿ ಆಸ್ಪತ್ರೆಯ ಶೌಚಾಲಯದ ಬಳಿ ಈ ಘಟನೆ ನಡೆದಿದೆ. ಕಸದ ತೊಟ್ಟಿಯಲ್ಲಿ ಗಂಡು ಶಿಶು ಪತ್ತೆಯಾಗಿದೆ. ಆಗಷ್ಟೇ ಜನಿಸಿದ್ದ ನವಜಾತ ಶಿಶುವನ್ನು ರಾಕ್ಷಸಿ ತಾಯಿ ಎಸೆದು ಹೋಗಿದ್ದಾಳೆ ಎನ್ನಲಾಗಿದೆ. ಕಸದ ತೊಟ್ಟಿಯಲ್ಲಿ ಮಗು ಅಳುತ್ತಿರುವುದನ್ನ ನೋಡಿದ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಆಗಮಿಸಿದ ಪೊಲೀಸರು, ಶಿಶುವನ್ನು ರಕ್ಷಿಸಿ ಔರಾದ್ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆನಂತರ ಭಾಲ್ಕಿಯ ದತ್ತು ಸೇವಾ ಕೇಂದ್ರಕ್ಕೆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಹಸ್ತಾಂತರಿಸಿದೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಗು ಅನೈತಿಕ ಸಂಬಂಧದಿಂದ ಹುಟ್ಟಿರಬಹುದು ಎಂದು ಶಂಕಿಸಲಾಗಿದೆ.