ಬೆಂಗಳೂರು: ಎಂಎಸ್ ರಾಮಯ್ಯ(MS Ramaiah) ಆಸ್ಪತ್ರೆ ಹತ್ತಿರ ಇದ್ದ ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.
ಇಲ್ಲಿಯ ಎಂಎಸ್ ಆರ್ ನಗರದಲ್ಲಿರುವ ಹೋಟೆಲ್ (Hotel)ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಎಂಎಸ್ ರಾಮಯ್ಯ ಆಸ್ಪತ್ರೆ ಗೇಟ್ ನಂಬರ್ 8ರ ಹತ್ತಿರ ಇರುವ ಹೋಟೆಲ್ ನಲ್ಲಿ ಈ ಸ್ಫೋಟ ಸಂಭವಿಸಿದೆ.
ಟಿಬೇಟಿಯನ್ ಫಾಸ್ಟ್ ಫುಡ್(Tibetan fast food) ಹೋಟೆಲ್ ನಲ್ಲಿ ಸ್ಪೋಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ.
ಗ್ಯಾಸ್ ಲೀಕೇಜ್(Gas leakage) ಆಗಿ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ರಾಮಯ್ಯ ಕಾಲೇಜು ಕಟ್ಟಡಕ್ಕೂ ಹಾನಿಯಾಗಿದೆ. ಅಲ್ಲದೇ, ಸ್ಪೋಟದ ರಭಸಕ್ಕೆ ರಾಮಯ್ಯ ಕಾಲೇಜಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎನ್ನಲಾಗಿದೆ. ಗುರುವಾರ (ಜ. 9) ಬೆಳಗ್ಗೆ 7.30ರ ಹೊತ್ತಿಗೆ ಸಿಲಿಂಡರ್ ಸ್ಪೋಟವಲಾಗಿದೆ. ಸ್ಥಳಕ್ಕೆ ಪೊಲೀಸರು(police) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.