ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಯಾವ ಸಮಯದಲ್ಲಿ ಯಾರ ಅಕೌಂಟ್ ನಿಂದ ಹಣ ಮಾಯವಾಗುತ್ತೆ ಎನ್ನುವುದೇ ತಿಳಿಯದಾಗಿದೆ. ಈ ಮಧ್ಯೆ ಸೈಬರ್ ಖದೀಮನೊಬ್ಬ ಪೊಲೀಸ್ ವೇಷ ಧರಿಸಿ, ನಿಜವಾದ ಪೊಲೀಸ್ ಗೆ ಕರೆ ಮಾಡಿ ಸಿಕ್ಕಿ ಬಿದ್ದಿದ್ದಾನೆ.
ಪೊಲೀಸ್ ಅಧಿಕಾರಿಯ ವೇಷದಲ್ಲಿರುವ ಸೈಬರ್ ಖದೀಮನೋರ್ವ ನಿಜವಾದ ಆಫೀಸರ್ ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ. ಆನಂತರ ನಿಜವಾದ ಅಧಿಕಾರಿ ಕ್ಯಾಮರಾ ಆನ್ ಮಾಡಿದಾಗ ಸೈಬರ್ ಖದೀಮ ಒಂದು ಕ್ಷಣ ಶಾಕ್ ಆಗಿದ್ದಾನೆ. ಅಧಿಕಾರಿ ಕಾಲ್ ರೆಕಾರ್ಡ್ ಹಾಗೂ ಡೀಟೇಲ್ಸ್ ತೆಗೆಸಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಿದ್ದಾರೆ. ಹೀಗಾಗಿ ನಿಜವಾದಿ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.